ಯುವ ಲೇಖಕ ಅನಿಂದಿತ್ ಕೊಚ್ಚಿ ಅವರ ಸಂಶೋಧನಾ ವರದಿ ಸಲ್ಲಿಕೆ – ಮಾರ್ಗದರ್ಶಕರಿಗೆ ಸನ್ಮಾನ

0
34

ದೆಹಲಿ: ಇಲ್ಲಿನ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫೋಟೋಗ್ರಫಿ’ (ಐಐಪಿ) ಯಲ್ಲಿ ತಮ್ಮ ಉನ್ನತ ವ್ಯಾಸಂಗ ಮಾಡುತ್ತಿರುವ ಸುಳ್ಯದ ಯುವ ಲೇಖಕ ಅನಿಂದಿತ್ ಅವರು, ಮೇಜರ್ ಪ್ರಾಜೆಕ್ಟ್ ರೂಪದಲ್ಲಿ ‘Unveiling Tulunad’s Bellare: Tracing India’s Earliest Freedom Movement (1837) and the Path to Heritage Conservation’ ಶೀರ್ಷಿಕೆಯಡಿಯಲ್ಲಿ ಸಂಶೋಧನಾ ವರದಿಯನ್ನು ಸಿದ್ಧಗೊಳಿಸಿ ಸಲ್ಲಿಸಿದ್ದಾರೆ.

ಐಐಪಿ ಸಂಸ್ಥೆಯ ಡೈರೆಕ್ಟರ್ ಶ್ರೀ ರಾಜೇಶ್ ಗೋಯಲ್ ಅವರು ಮಾತನಾಡುತ್ತಾ, “ಇದು ನೈಜ ಐತಿಹಾಸಿಕ ಘಟನೆಯ ಸುತ್ತ ಸಂಶೋಧನೆಯಾಗಿ ರೂಪುಗೊಂಡಿದ್ದು, ಈ ವಿಷಯ ಮುಖ್ಯವಾದದ್ದು” ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಾಜೆಕ್ಟ್ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ ಶ್ರೀಮತಿ ವಿನತಿ ಸೆಹಗಲ್ ಅವರಿಗೆ, ತುಳುನಾಡ ಸಂಸ್ಕೃತಿಯ ಪ್ರತೀಕವಾದ ಪುರಾತನ ಧ್ವಜವಿನ್ಯಾಸವಿರುವ ಗೌರವಾರ್ಪಣಾ ಶಾಲ್ ಅನ್ನು ಡೈರೆಕ್ಟರ್ ಅವರು ಹೊದಿಸಿ ಸನ್ಮಾನಿಸಿದರು. ಜೊತೆಗೆ, ಪ್ರಾಜೆಕ್ಟ್ ಕವರ್ ಪೋಸ್ಟರ್ ಅನ್ನು ಅವರಿಬ್ಬರೂ ಅನಾವರಣಗೊಳಿಸಿದರು.

ಭಾರತದ ಗ್ರಾಮೀಣ ಭಾಗದಿಂದ ಪ್ರಾರಂಭವಾದ ಜನಸಂಘಟಿತ ಸ್ವಾತಂತ್ರ್ಯ ಚಳವಳಿ ಹೇಗೆ ಬೆಳವಣಿಗೆಯಾಯಿತು? ಹಿನ್ನಲೆಯಲ್ಲಿ ಏನೆಲ್ಲ ಕಾರಣಗಳಿದ್ದವು? ಮತ್ತು ದಾಖಲೆ ಆಧಾರಗಳು ಏನು ಹೇಳುತ್ತವೆ? ಈ ಪ್ರಶ್ನೆಗಳಿಗೆ ಸಂಶೋಧನೆ ಮತ್ತು ಡಾಕ್ಯುಮೆಂಟೇಷನ್ ಮೂಲಕ ಉತ್ತರ ಹುಡುಕುವ ಪ್ರಯತ್ನವೇ ಈ ಪ್ರಾಜೆಕ್ಟ್ ಎಂದು ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಐಐಪಿ ಟ್ರಸ್ಟಿ ಶ್ರೀ ಶೈಲೇಶ್ ಗೋಯಲ್, ಸಿನೆಮಾಟೋಗ್ರಫಿ ಶಿಕ್ಷಕ ಆಸಿಫ್ ಖಾನ್, ಯೋಗಿ ಹಾಗೂ ಶೈಲೇಂದ್ರ ಮೆಹ್ರಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here