ಮಂಗಳೂರು : ಕಾವೂರು ಆದಿಚುಂಚನಗಿರಿ ಮಠ ಮತ್ತು ವಿದ್ಯಾಸಂಸ್ಥೆಗೆ ವಿವಿಧ ಕಾರ್ಯಗಳ ಉದ್ಘಾಟನೆಗೆ ನಿಮಿತ್ತಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿಯವರು ಭೇಟಿ ನೀಡಿದ್ದರು. Bharat Deepa Defence and Space Research and Development India ಸಂಸ್ಥೆಯ ಸಂಸ್ಥಾಪಕ ಮತ್ತು CEO ಶ್ರೀ ದೀಪಕ್ ಎ.ಎಸ್ ಅವರಿಗೆ ಪರಮಪೂಜ್ಯ ಜಗದ್ಗುರುಗಳ ಆಶೀರ್ವಾದ ಲಭಿಸಿದೆ.
ದೀಪಕ್ ಎ.ಎಸ್ ಅವರು ತಮ್ಮ ಸಾಧನೆಗಳಾದ ಇಂಡಿಯನ್ book of ರೆಕಾರ್ಡ್ಸ್ ಇಸ್ರೋ ಮತ್ತು drdo ಸಂಬಂದಿಸಿದ . ಭಾರತ ಸರ್ಕಾರದ ಪೇಟೆಂಟ್, ಎಂಎಸ್ಎಂಇ ನೋಂದಣಿ, ಮೈಗವ್ 80+ ಸರ್ಟಿಫಿಕೇಟ್ , ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಪ್ರಶಸ್ತಿ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅವರು ತಮ್ಮ ಪ್ರಶಸ್ತಿ ಪತ್ರ ಮತ್ತು ಪದಕವನ್ನು ಜಗದ್ಗುರುಗಳಿಗೆ ಅರ್ಪಿಸಿ ಆಶೀರ್ವಾದ ಪಡೆದರು. ಜಗದ್ಗುರುಗಳು ದೀಪಕ್ ಅವರ ರಾಷ್ಟ್ರಭಕ್ತಿ ಮತ್ತು “ಆತ್ಮನಿರ್ಭರ ಭಾರತ, ವಿಕಸಿತ ಭಾರತ 2047” ಗಾಗಿ ಮಾಡುತ್ತಿರುವ ಪ್ರಯತ್ನವನ್ನು ಶ್ಲಾಘಿಸಿ, ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಸಾಧನೆ ಮಾಡುವಂತೆ ಹಾರೈಸಿದರು.
ಈ ಬಗ್ಗೆ ಮಾತನಾಡಿದ ದೀಪಕ್ ಎ.ಎಸ್, “ಗುರುಗಳ ಆಶೀರ್ವಾದ ಅವಿಸ್ಮರಣೀಯ ಕ್ಷಣ ನನ್ನ ಜೀವನದಲ್ಲಿ ಮತ್ತು ದೇಶದ ಯುವಕರ ಬೆಂಬಲವೇ ನನ್ನ ಶಕ್ತಿ. ನಾವು ಕನಸು ಕಾಣುವುದನ್ನು ಮಾತ್ರವಲ್ಲ, ಅದನ್ನು ಸಾಕಾರಗೊಳಿಸುತ್ತೇವೆ. ನಮ್ಮ ಧ್ಯೇಯ ಒಂದೇ ಎಂದರು.

