ಸೂಟ್‌ ಕೇಸ್ ನಲ್ಲಿ ಯುವತಿಯ ಮೃತದೇಹ ಪತ್ತೆ

0
811

ಬೆಂಗಳೂರು: ಯುವತಿಯೊಬ್ಬಳ ಮೃತದೇಹ ಬೆಂಗಳೂರಿನ ರೈಲ್ವೆ ಸೇತುವೆಯ ಬಳಿ ಸೂಟ್‌ ಕೇಸ್ ನಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಬೆಂಗಳೂರಿನ ಹೊರವಲಯದಲ್ಲಿರುವ ಹಳೆಯ ಚಂದಾಪುರ ರೈಲ್ವೆ ಸೇತುವೆಯ ಬಳಿ ಸ್ಥಳೀಯ ನಿವಾಸಿಗಳು ಸೂಟ್‌ ಕೇಸ್ ನ್ನು ಪತ್ತೆಹಚ್ಚಿದ್ದು, ಚಲಿಸುವ ರೈಲಿನಿಂದ ಸೂಟ್ ಕೇಸ್ ಹೊರಗೆ ಎಸೆದಿರಬಹುದು ಎಂದು ಶಂಕಿಸಲಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ ಮಹಿಳೆಯನ್ನು ಬೇರೆಡೆ ಕೊಲೆ ಮಾಡಲಾಗಿದೆ ಮತ್ತು ಸೂಟ್‌ ಕೇಸ್‌ನಲ್ಲಿ ತುಂಬಿ ಶವವನ್ನು ಚಲಿಸುವ ರೈಲಿನಿಂದ ಹೊರಗೆ ಎಸೆಯಲಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರು ಪೊಲೀಸರು ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿಕೊಳ್ಳುತ್ತಿದ್ದಾರೆ ಮತ್ತು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

LEAVE A REPLY

Please enter your comment!
Please enter your name here