ಪಡುಬಿದ್ರಿ : ಯುವವಾಹಿನಿ ಸ್ಫೂರ್ತಿದಾಯಕ ಸಂಸ್ಥೆ. ಯುವಜನರನ್ನು ಸಾಮಾಜಿಕವಾಗಿ ಶೈಕ್ಷಣಿಕವಾಗಿ ರೂಪಿಸಲು ಶ್ರಮ ವಹಿಸುತ್ತಿದೆ.
ಮಕ್ಕಳಲ್ಲಿ ಆತ್ಮ ವಿಶ್ವಾಸ ಸಣ್ಣ ವಯಸ್ಸಿನಲ್ಲೇ ಮೂಡಿ ಬರಬೇಕಿದೆ. ಸಮಾಜ ಸೇವೆ ಮಾಡುವ ತುಡಿತ ಪ್ರತಿಯೊಬ್ಬರಲ್ಲಿ ಇದ್ದಾಗ ಮಾತ್ರ ಬದುಕಲ್ಲಿ ಸಾರ್ಥಕತೆ ಮೂಡಬಹುದು ಎಂದು ಬ್ರಿಟನ್ ಬಿಲ್ಲವ ಬಳಗದ ಅಧ್ಯಕ್ಷರಾದ ಡಾ| ಪಿ.ಕೆ ಮನೋಜ್ ಪೂಜಾರಿ ಹೇಳಿದರು.
ಅವರು ಭಾನುವಾರ ಸಹಕಾರ ಸಂಗಮ ಪಡುಬಿದ್ರಿ ಸಿ.ಎ ಸೊಸೈಟಿ ಸಭಾಂಗಣದಲ್ಲಿ ಜರಗಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ 2026-27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ, ಪ್ರತಿಭಾ ಪುರಸ್ಕಾರ ಹಾಗೂ ಪಿ.ಕೆ ಜಯರಾಮ್ ಪ್ರವರ್ತಿತ ವಿದ್ಯಾ ನಿಧಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವವಾಹಿನಿ ಕೇಂದ್ರ ಸಮಿತಿ, ಮಂಗಳೂರು ಇದರ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಪಡುಬಿದ್ರಿ ಯುವವಾಹಿನಿಯ ನೂತನ ಕಾರ್ಯಕಾರಿ ಸಮಿತಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಯುವವಾಹಿನಿ ಪಡುಬಿದ್ರಿ ಘಟಕದ ಅಧ್ಯಕ್ಷರಾದ ವಿಧಿತ್ ಪೂಜಾರಿ ಕರ್ನಿರೆ ನೂತನ ಅಧ್ಯಕ್ಷ ನಿಖಿಲ್ ಪೂಜಾರಿಯವರಿಗೆ ಹಾಗೂ ಕಾರ್ಯದರ್ಶಿ ಭಾಸ್ಕರ್ ಎನ್. ಅಂಚನ್ ನೂತನ ಕಾರ್ಯದರ್ಶಿ ರಾಜೇಶ್ವರಿ ಅವಿನಾಶ್ ರವರಿಗೆ ಅಧಿಕಾರ ಹಸ್ತಾಂತರಿಸಿದರು.
ಪ್ರತಿಭಾ ಪುರಸ್ಕಾರ/ವಿದ್ಯಾರ್ಥಿ ವೇತನ : ಶೈಕ್ಷಣಿಕ ವಾಗಿ ಸಾಧಿಸಿದ ಪ್ರತಿಭೆಗಳಿಗೆ ಹಾಗೂ ಪಡುಬಿದ್ರಿ ವ್ಯಾಪ್ತಿಯ ಪಿಯುಸಿ, ಪದವಿ, ಸ್ನಾತಕೋತ್ತರ, ವೃತ್ತಿಪರ ಶಿಕ್ಷಣಾರ್ಥಿಗಳಿಗೆ ಪಿ.ಕೆ ಜಯರಾಮ್ ಪ್ರವರ್ತಿತ 4 ಲಕ್ಷ ರೂ. ವಿದ್ಯಾ ನಿಧಿಯನ್ನು 60 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಸನ್ಮಾನ : ಡಾ| ಪಿ.ಕೆ ಮನೋಜ್ ಪೂಜಾರಿ ದಂಪತಿಯನ್ನು ಹಾಗೂ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಅಶೋಕ್ ಪಡ್ಪು ಮತ್ತು ಘಟಕದ ಅಧ್ಯಕ್ಷ ವಿಧಿತ್ ಪೂಜಾರಿ ದಂಪತಿಯನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಎ.ಜೆ.ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಪ್ರೊಫೆಸರ್ ಡಾ| ಪಿ.ಕೆ.ಕಿರಣ್ ಕುಮಾರ್, ಉದ್ಯಮಿ ಗಣೇಶ್ ಗುಜರನ್, ನಳಿನಿ ಜಯರಾಮ್, ಪಡುಬಿದ್ರಿ ಬಿಲ್ಲವ ಸಂಘದ ಅಧ್ಯಕ್ಷರಾದ ವೈ.ಸುಧೀರ್ ಕುಮಾರ್, ಯುವವಾಹಿನಿ ಕೇಂದ್ರ ಸಮಿತಿ, ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿ ಮಮತಾ ರಾಜ್, ಅರುಣ್ ಪಿ.ಕೆ., ಸುಶ್ಮಾ ಅರುಣ್, ಡಾ| ಎನ್ ಟಿ ಅಂಚನ್, ಭಾಸ್ಕರ್ ಎನ್ ಅಂಚನ್ ಉಪಸ್ಥಿತರಿದ್ದರು.
ಯುವವಾಹಿನಿ ಪಡುಬಿದ್ರಿ ಘಟಕದ ಅಧ್ಯಕ್ಷರಾದ ವಿಧಿತ್ ಪೂಜಾರಿ ಕರ್ನಿರೆ ಅಧ್ಯಕ್ಷತೆ ವಹಿಸಿದ್ದರು. ಸುಗಂಧಿ ಶ್ಯಾಮ್ ಪ್ರಾರ್ಥಿಸಿ, ಸುಜಿತ್ ಕುಮಾರ್ ಪ್ರಸ್ತಾವಿಸಿದರು. ವಿಧಿತ್ ಪೂಜಾರಿ ಕರ್ನಿರೆ ಸ್ವಾಗತಿಸಿದರು. ಭಾಸ್ಕರ್ ಎನ್ ಅಂಚನ್ ವರದಿ ವಾಚಿಸಿದರು. ಶಶಿಕಲಾ ಯಶೋಧರ್ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು.
ಚೈತ್ರ ಗಣೇಶ್, ಚೈತ್ರ ಮನೋಹರ್ ಮತ್ತು ಹರೀಶ್ ಕೋಟ್ಯಾನ್ ಉಳ್ಳೂರು ನಿರೂಪಿಸಿ, ರಾಜೇಶ್ವರಿ ಅವಿನಾಶ್ ವಂದಿಸಿದರು.

