ಜು.27ರಂದು ಸಿದ್ಧಾಪುರದಲ್ಲಿ ವಲಯ ಮಟ್ಟದ ಶಾಲಾ ಚದುರಂಗ ಪಂದ್ಯಾಟ

0
10

ಸಿದ್ಧಾಪುರ : ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ ಹಾಗೂ ಸರಸ್ವತಿ ವಿದ್ಯಾಲಯ, ಸಿದ್ಧಾಪುರ ಇವರ ಸಹಯೋಗದಲ್ಲಿ 2026-27ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ವಲಯ ಮಟ್ಟದ ಚದುರಂಗ ಪಂದ್ಯಾಟವು ಜುಲೈ 27ರಂದು (ಸೋಮವಾರ) ಬೆಳಿಗ್ಗೆ 9.30 ಗಂಟೆಗೆ ಸರಸ್ವತಿ ವಿದ್ಯಾಲಯದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಮುಖ ಎಜುಕೇಶನಲ್ ಟ್ರಸ್ಟ್ (ರಿ.) ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿ ವಹಿಸಲಿದ್ದು, ಡಾ. ನಾಗಭೂಷಣ ಉಡುಪ ಪಂದ್ಯಾಟವನ್ನು ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರೇಖಾ ಭಾಗವಹಿಸಲಿದ್ದಾರೆ.

ಗೌರವ ಉಪಸ್ಥಿತರಾಗಿ ಯು. ಪಾಂಡುರಂಗ ಪಡಿಯಾರ್ (ಕಾರ್ಯದರ್ಶಿ, ಸುಮುಖ ಎಜುಕೇಶನಲ್ ಟ್ರಸ್ಟ್), ಸತ್ಯನಾರಾಯಣ ಜಿ. (ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ), ಶೇಖರ್ (ಶಿಕ್ಷಣ ಸಂಯೋಜಕರು, ಸಿದ್ಧಾಪುರ) ಹಾಗೂ ಪ್ರಭಾಕರ್ ಶೆಟ್ಟಿ (ಸಮೂಹ ಸಂಪನ್ಮೂಲ ವ್ಯಕ್ತಿ, ಸಿದ್ಧಾಪುರ) ಉಪಸ್ಥಿತರಿರುವರು.

ಈ ವಲಯ ಮಟ್ಟದ ಚದುರಂಗ ಪಂದ್ಯಾಟದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಜ್ಞಾನಸರಸ್ವತಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ಪ್ರಾಂಶುಪಾಲರು, ಮುಖ್ಯ ಶಿಕ್ಷಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.