ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ ,ಸಚ್ಚೇರಿಪೇಟೆಯಲ್ಲಿ 12ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ

0
39

ಸಚ್ಚೇರಿಪೇಟೆ : ಪ್ರಗತಿಪರ ಕೃಷಿಕರು ಹಾಗೂ ಆರ್ಟ್ ಆಫ್ ಲಿವಿಂಗ್ ಶಿಕ್ಷಕರಾದ ಸುನೀತಾ ಉದಯ್ ಕುಮಾರ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಯೋಗವು ಆರೋಗ್ಯಪೂರ್ಣ ಜೀವನಕ್ಕೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಅವರು ಮಹರ್ಷಿ ಪತಂಜಲಿ ಅವರು ಪ್ರತಿಪಾದಿಸಿದ ಅಷ್ಟಾಂಗ ಯೋಗದ ಅಂಗಗಳಾದ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.

ಮಾನಸಿಕ ಹಾಗೂ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳಲು ಯೋಗವು ಅತ್ಯಂತ ಸಹಕಾರಿಯಾಗಿದೆ .ಯೋಗವೇ ಆರೋಗ್ಯದ ಮೂಲ ಯೋಗದಿಂದ ಆರೋಗ್ಯಕರ ಜೀವನ ಸಾಧ್ಯ ಎಂದು ಶಾಲಾ ಸಂಚಾಲಕರಾದ ಲ. ಕೆ. ಸತ್ಯಶಂಕರ್ ಶೆಟ್ಟಿ ಅವರು ತಿಳಿಸಿದರು.

ಮುಂಡ್ಕೂರು–ಕಡಂದಲೆ ಲಯನ್ಸ್ ಕ್ಲಬ್ ನ ನಿಯೋಜಿತ ಕಾರ್ಯದರ್ಶಿಯಾದ ಪೀಟರ್ ರೋನಾಲ್ಡ್ ಮಸ್ಕರೇನಸ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿ, ಸಂದರ್ಭೋಚಿತವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಂಡ್ಕೂರು–ಕಡಂದಲೆ ಲಯನ್ಸ್ ಕ್ಲಬ್ ನ ನಿಯೋಜಿತ ಅಧ್ಯಕ್ಷರಾದ ಲಯನ್ ಸುರೇಶ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಗೌರವ್ ಆರ್. ಕೆ., ಸಂಸ್ಥೆಯ ಯೋಗ ಶಿಕ್ಷಕಿ ಮಧುಶ್ರೀ ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಯೋಗ ಪ್ರದರ್ಶನ ನಡೆಸಿದರು. ವಿದ್ಯಾರ್ಥಿನಿ ಕುಮಾರಿ ಶಾಯ್ಸಯಿ ಸ್ವಾಗತಿಸಿದರು. ಕುಮಾರಿ ಧೃತಿ ಎಸ್. ಕಾರ್ಯಕ್ರಮ ನಿರೂಪಿಸಿದರು ಹಾಗೂ ಕುಮಾರಿ ಸ್ಫೂರ್ತಿ ವಂದನಾರ್ಪಣೆ ಸಲ್ಲಿಸಿದರು.

LEAVE A REPLY

Please enter your comment!
Please enter your name here