ನಿವೃತ್ತ ಸ್ವಾತಂತ್ರ್ಯ ಯೋಧ ಯು.ಕೆ. ಗೋಪಾಲಕೃಷ್ಣರಾವ್‌ ನಿಧನ

0
19

ಮಣಿಪಾಲ : ನಿವೃತ್ತ ಸ್ವಾತಂತ್ರ್ಯ ಯೋಧ ಯು.ಕೆ. ಗೋಪಾಲಕೃಷ್ಣರಾವ್‌ 92 ವರ್ಷ ಇವರು ದಿನಾಂಕ: 19-06-2026ರಂದು ಮಣಿಪಾಲ್ ನ ಸ್ವಗೃಹದಲ್ಲಿ ನಿಧನ ಹೊಂದಿದರು.

ಇವರು ಭಾರತೀಯ ಸೇನೆಯ ಅಂಗ ಸಂಸ್ಥೆ ಜಿ.ಆರ್.ಇ.ಏ.ಏಫ್‌ (ಬಿ.ಆರ್.ಓ.) ಇಲ್ಲಿ ಫಾರ್ಮಸಿಸ್ಟ್‌ ವೃತ್ತಿಯನ್ನು ಸುಮಾರು 24 ವರ್ಷ ಸೇವೆ ಸಲ್ಲಿಸಿರುತ್ತಾರೆ, ಉತ್ತರ ಭಾರತದ ಜೋಶಿ ಮಠ, ಅರುಣಾಚಲ ಪ್ರದೇಶ, ಸಿಕ್ಕಿಂ, ಅಂಡಮಾನ್‌ ನಿಕೋಬಾರ್‌ ಹಾಗೂ ನೆರೆ ರಾಷ್ಟ್ರ ಭೂತಾನ್‌ ನಲ್ಲಿ ತಮ್ಮ ವೃತ್ತಿ ಜೀವನ ನಡೆಸುತ್ತಿದ್ದರು.

ಇವರ ಉತ್ತಮ ಸೇವೆಯನ್ನು ಗುರುತಿಸಿ ಭಾರತೀಯ ಸೇನೆಯು ಸಂಗ್ರಾಮ್‌ ಸೇವಾ ಮೆಡೆಲ್‌ ಮತ್ತು ವಿದೇಶ್ ಸೇವಾ ಮೆಡಲ್‌ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಹಾಗೂ ಉಡುಪಿ ಪಲಿಮಾರು ಮಠದ ವಿದ್ಯಾದೀಶ ಶ್ರೀಪಾದರು ಅವರ ಪರ್ಯಾಯ ಸಮಯದಲ್ಲಿ ಶ್ರೀಕೃಷ್ಣಾನುಗ್ರಹ ಅಭಿನಂದನಾ ಪ್ರಶಸ್ತಿಯನ್ನು ನೀಡಿರುತ್ತಾರೆ. ಪತ್ನಿ ಶಾಂತಾ ಜಿ. ರಾವ್‌, ಐದು ಪುತ್ರಿಯರು, ಅಳಿಯಂದಿರು ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿರುತ್ತಾರೆ.

LEAVE A REPLY

Please enter your comment!
Please enter your name here