ರಾಜಶ್ರೀ ಕೃಷ್ಣ ರಾಜ ಒಡೆಯರ 142ನೇ ಜನ್ಮ ದಿನಾಚರಣೆ

0
37

ಗಾಂಧಿನಗರ ಮೈಸೂರು ಸಂಸ್ಥಾನದ ಸರ್ವತೋಮುಖ ಅಭಿವೃದ್ಧಿ ಮಾತ್ರವಲ್ಲದೆ ಫಲನುಭವಿಗಳಿಗೆ ಉತ್ತಮ ವೇದಿಕೆ ಕಲ್ಪಿಸುವ ಮತ್ತು ಉತ್ತಮ ಭವಿಷ್ಯ ರೂಪಿಸುವ ರೂವಾರಿಯಾಗಿ ಸಾಹಿತ್ಯ, ಕೈಗಾರಿಕೆ, ಶಿಕ್ಷಣ ಸಂಸ್ಥೆ, ಕೃಷಿ ನೀರಾವರಿ,ಕೆ. ಆರ್. ಎಸ್ ಅಣೆಕಟ್ಟು ಹೀಗೆ ಜನಪರ ಅಭಿವೃದ್ಧಿಗಾಗಿ ಹಲವಾರು ಕೊಡುಗೆಗಳನ್ನು ಕೃಷ್ಣ ರಾಜ ಒಡೆಯರ್ ಅವರು ನೀಡಿದ್ದು ಅವರ ಸಾಧನೆ ಶ್ಲಾಘನೀಯ ಎಂದು ಡಾ. ನಾಗಣ್ಣ ಡಿ. ಎ ಸಹಾಯಕ ಪ್ರಾಧ್ಯಪಕರು ಶ್ರೀಧರ್ಮಸ್ಥಳ ಮಂಜುನಾಥ ಕಾಲೇಜು ಉಜಿರೆ ಇವರು ಹೇಳಿದರು.

ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ ಗಾಂಧಿನಗರ ಮಂಗಳೂರು ಇಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ ಶಿಕ್ಷಣ ಸಂಸ್ಥೆಯೊಂದಿಗೆ ಸೇರಿ ನಾಲ್ವಡಿ ಕೃಷ್ಣ ರಾಜ ಒಡೆಯರ ೧೪೨ನೇಯ ಜನ್ಮ ದಿನಾಚರಣೆಯ ಆಚರಣೆ ವೇಳೆಯಲ್ಲಿ ಮುಖ್ಯ ಸಂಪನ್ಮೂಲ ಅತಿಥಿಗಳಾಗಿ ಬಂದಂತಹ ಡಾ. ನಾಗಣ್ಣ ಡಿ. ಎ ಸಹಾಯಕ ಪ್ರಾಧ್ಯಪಕರು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಕಾಲೇಜು ಉಜಿರೆ ಇವರು ಪ್ರಶಿಕ್ಷಣಾರ್ಥಿಗಳಿಗೆ ನಾಲ್ವಡಿ ಕೃಷ್ಣ ರಾಜ ಒಡೆಯರ ಜನಪರ ಕಾಳಜಿ, ಅವರು ನೀಡಿದ ಹಲವಾರು ಕೊಡುಗೆಗಳು ಹಾಗೂ ಅವರ ಸಾಧನೆಯ ಗರಿಮೆಯ ಬಗ್ಗೆ ವಿವರವಾದ ಉಪನ್ಯಾಸವನ್ನು ನಿಡೀದರು.

ಇನ್ನೊರ್ವ ಅತಿಥಿಗಳಾದ ಶ್ರೀ ಮಂಜುನಾಥ ಎಸ್.ರೇವಣಕರ್ ಅವರು ನಾಲ್ವಡಿ ಕೃಷ್ಣ ರಾಜ ಒಡೆಯರ ಜನ್ಮ ದಿನಾಚರಣೆಯ ಶುಭಾಶಯ ಕೋರಿ,ದಿನದ ವಿಶೇಷತೆಯ ಕುರಿತು ಚೊಕ್ಕದಾಗಿ ಮಾತನಾಡಿದರು.

ನಾಲ್ವಡಿ ಕೃಷ್ಣ ರಾಜ ಒಡೆಯರ ಜನ್ಮ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಶ್ರೀ ವಸಂತ ಕಾರಂದೂರು ನ್ಯಾಯವಾದಿಗಳು, ಸಂಚಾಲಕರು ಎಸ್. ಜಿ. ಸಿ. ಇ ಇವರು ಉದ್ಘಾಟನ ಮಾತುಗಳನ್ನಾಡಿದರು. ಎಸ್. ಜಿ. ಸಿ. ಇ ಪ್ರಾಂಶುಪಾಲರು ಪ್ರೊ.ಉದಯ ಕುಮಾರ್. ಪಿ ಪ್ರಾಸ್ತವಿಕ ನುಡಿಯನ್ನು ಆಡಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಡಾ. ಎಂ. ಪಿ ಶ್ರೀನಾಥ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರು ನಾಲ್ವಡಿ ಕೃಷ್ಣರಾಜರ ಮಹತ್ವವನ್ನು ತಿಳಿಸುತ, ಶ್ರೀಗೋಕರ್ಣನಾಥೇಶ್ವರ ವಿದ್ಯಾ ಸಂಸ್ಥೆಯ ಕುರಿತು ಮೆಚ್ಚುಗೆಯ ಮಾತನಾಡಿದರು.

ವಿಭಾಗದ ಬೋಧಕ ವೃಂದ, ಬೋಧಕೇತರ ವೃಂದ ಹಾಗೂ ಪ್ರಶಿಕ್ಷಣಾರ್ಥಿಗಳು ಭಾಗಿಯಾಗಿದ್ದರು. ವಿದ್ಯಾರ್ಥಿನಿ ಶ್ರೀಮತಿ ಪೂರ್ವ.ಕೆ ಕಾರ್ಯಕ್ರಮ ನಿರೂಪಿಸಿದರು,ಶ್ರೀಮತಿ ಶೀತಲ ಸ್ವಾಗತಿಸಿದರು, ಶ್ರೀಮತಿ ಶೃತಿ ತಂಡ ನಾಡಗೀತೆ ಹಾಡಿದರು, ಕು.ದೀಪ್ತಿ.ಎಂ ವಂದಿಸಿದರು.

LEAVE A REPLY

Please enter your comment!
Please enter your name here