ಸಜೀಪಮೂಡ ಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ ಜೋಡುಶನೇಶ್ವರ ವ್ರತ ಕಥಾ ಕಲ್ಪೋಕ್ತ ಪೂಜೆ ಸಂಪನ್ನ

0
6

ಬಂಟ್ವಾಳ: ಅನ್ನಪಾಡಿ ಸಜೀಪಮೂಡದ ಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ ಜೋಡುಶನೇಶ್ವರ ವ್ರತ ಕಥಾ ಕಲ್ಪೋಕ್ತ ಪೂಜೆಯು ಧಾರ್ಮಿಕ ಶ್ರದ್ಧಾಭಕ್ತಿಯಿಂದ ನೆರವೇರಿತು.

ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ಜರುಗಿದವು. ಭಕ್ತರು ಪೂಜೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಶ್ರೀನಿವಾಸ, ಶಿವ, ತಾಯ ಲಿಂಗಪ್ಪ ದೋಟ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.