22 ನೇ ವರುಷದ ಊದು ಪೂಜಾ ಕಾರ್ಯಕ್ರಮ

0
5

ಕಾಸರಗೋಡು : ನವರಾತ್ರಿ ಉತ್ಸವದ ನವಮಿಯಂದು ಕೊರಕೋಡು ಟೈಗರ್ಸ್ ನೇತೃತ್ವದಲ್ಲಿ ಜರಗಿದ 22 ನೇ ವರುಷದ ಹುಲಿವೇಷ ಕುಣಿತದ ಊದು ಪೂಜಾ ಸಭಾ ಕಾರ್ಯಕ್ರಮವನ್ನು ಧಾರ್ಮಿಕ ನೇತಾರ ಶ್ರೀ ರವೀಶ ತಂತ್ರಿ ಕುಂಟಾರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಡಾl ಕೆ.ಎನ್. ವೆಂಕಟ್ರಮಣ ಹೊಳ್ಳ, ವಿಶ್ವನಾಥ ಮಣಿಯಾಣಿ ಕೊರಕೋಡು, ರಾಜೇಶ್ ಪ್ರಭು ಬಟ್ಟಂಪಾರೆ, ರಾಜೇಶ್ ನುಳ್ಳಿಪ್ಪಾಡಿ, ಮುರಳೀ ಮಾಸ್ಟರ್, ಹರೀಶ, ನಗರಸಭಾ ಸದಸ್ಯ ಮಧುಕರ ಉಪಸ್ಥಿತರಿದ್ದರು. ಗೋಕುಲ್ ಝೂಮ್, ಪ್ರವೀಣ್ ಕೊರಕೋಡು ಇವರು ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು. ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಊರಿನವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.