ಶ್ರೀ ಶಕ್ತಿ ಗಣಪತಿ ಷಣ್ಮುಖ ಸುಬ್ರಹ್ಮಣ್ಯ ಭಜನಾ ಮಂಡಳಿ ಯ 23ನೇ ವರ್ಷದ ಏಕಾಹಃ ಭಜನಾ ಮಹೋತ್ಸವ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪ ನಡು ಕ್ಷೇತ್ರದಲ್ಲಿ ಶನಿವಾರ ಸೂರ್ಯೋದಯಕ್ಕೆ ಸರಿಯಾಗಿಭಜನಾ ಮಹೋತ್ಸವವನ್ನು ದೀಪ ಬೆಳಗಿಸಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಚಾಲನೆನೀಡಿದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಅರ್ಚಕ ಗಣಪತಿ ಮಹಾಬಲೇಶ್ವರ ಭಟ್, ಕೋಚ ಪೂಜಾರಿ ಯಾನೆ ಶಂಕರ ಪೂಜಾರಿ, ಸುರೇಶ್ ಬಂಗೇರ,ಗಂಗಾಧರ, ಸುಧಾಕರ ಕೇಟಿ, ರಾಮ ಬರೆ, ಮೊದಲಾದವರು ಉಪಸ್ಥಿತರಿದ್ದರು.

