ಮಿಕ್ಸ್‌ಚರ್ ತಿನ್ನುತ್ತಿದ್ದಾಗ ಉಸಿರುಗಟ್ಟಿ 3 ವರ್ಷದ ಬಾಲಕ ಮೃತ್ಯು

0
26

ಕೇರಳ : ಕೇರಳದ ಮಲಪ್ಪುರಂ ಜಿಲ್ಲೆಯ ವಂಗರಾ ಸಮೀಪದ ಕುನ್ನುಂಪುರಂನಲ್ಲಿ ಮಿಕ್ಸ್‌ಚರ್ ತಿನ್ನುತ್ತಿದ್ದ ವೇಳೆ ಗಂಟಲಿನಲ್ಲಿ ಕಡಲೆಕಾಯಿ ಸಿಲುಕಿ ಮೂರು ವರ್ಷದ ಬಾಲಕ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಮನೆದಲ್ಲಿ ಮಿಕ್ಸ್‌ಚರ್ ಸೇವಿಸುತ್ತಿದ್ದ ವೇಳೆ ಕಡಲೆಕಾಯಿ ಆಕಸ್ಮಿಕವಾಗಿ ಮಗುವಿನ ಗಂಟಲಿನಲ್ಲಿ ಸಿಲುಕಿದ್ದು, ಇದರಿಂದ ಮಗುವಿಗೆ ಉಸಿರಾಟದ ತೊಂದರೆ ಉಂಟಾಗಿದೆ. ಗಾಬರಿಗೊಂಡ ಪೋಷಕರು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಗತ್ಯ ಕಾನೂನು ಕ್ರಮಗಳೊಂದಿಗೆ ಮುಂದಿನ ತನಿಖೆ ಕೈಗೊಂಡಿದ್ದಾರೆ.