50 ವರ್ಷಗಳ ಸೇವಾ ಪಯಣ : ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಮೂಡುಬಿದಿರೆ ಲಯನ್ಸ್ ಕ್ಲಬ್

0
14

ಮೂಡುಬಿದಿರೆ : ದಿನಾಂಕ 16.06.1976 ರಂದು ಪೂರ್ವ ರಾಜ್ಯಪಾಲರಾದ ಎಂ. ಸಿ. ಶಾಸ್ತ್ರಿ ಯವರ ಮಂಗಳೂರು ಲಯನ್ಸ್ ಕ್ಲಬ್ಬಿನ ಪ್ರಾಯೋಜಕತ್ವ ದಡಿಯಲ್ಲಿ ಆರಂಭವಾದ ಮೂಡುಬಿದಿರೆಯ ಲಯನ್ಸ್ ಕ್ಲಬ್ ಇದೀಗ 50 ವರ್ಷಗಳನ್ನು ಪೂರ್ಣಗೊಳಿಸಿದ್ದು, ಸುವರ್ಣ ಮಹೋತ್ಸವ ಸಂಭ್ರಮಾಚರಣೆಯಲ್ಲಿದೆ .

ಅಂದಿನ ಸ್ಥಾಪಕ ಅಧ್ಯಕ್ಷ ಕೆ ರಾಮಚಂದ್ರ ರವರ ನೇತೃತ್ವದಲ್ಲಿ ಆರಂಭವಾಗಿ ಇದೀಗ 50 ಅಧ್ಯಕ್ಷರುಗಳ ಸಮಗ್ರ ಮುಂದಾಳತ್ವದಲ್ಲಿ ಮೂಡುಬಿದಿರೆಯ ಜನತೆಗೆ ಅದೆಷ್ಟೋ ಸೇವೆಗಳನ್ನು ನೀಡಿದ ಹೆಮ್ಮೆ ಯ ಸಂಸ್ಥೆಯಾಗಿ ಮೂಡಿ ಬಂದಿದೆ. ಲಯನ್ಸ್ ಜಿಲ್ಲೆ 317 D ಇದರ ಮಾರ್ಗದರ್ಶನದಲ್ಲಿ ಈವರೆಗೆ ಮೂಡುಬಿದರೆ ಲಯನ್ಸ್ ಕ್ಲಬ್ಬಿನಿಂದ 5 ಜನ ಪ್ರಾಂತೀಯ ಅಧ್ಯಕ್ಷರುಗಳನ್ನು ಜಿಲ್ಲೆಗೆ ನೀಡಿದ ಹೆಮ್ಮೆ.

ಇದೀಗ ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಲಯನ್ಸ್ ಕ್ಲಬ್ 22 ಸದಸ್ಯರುಗಳನ್ನು ಒಳಗೊಂಡು ನೂತನವಾಗಿ ಲಯನ್ಸ್ ಸೇವಾ ಟ್ರಸ್ಟ್ ಮೂಡುಬಿದಿರೆ( ರಿ ) ನ್ನು ಸ್ಥಾಪಿಸಿ ಲಯನ್ಸಿನ ಎಲ್ಲ ಸದಸ್ಯರುಗಳ ಧನಸಹಾಯದ ಮೂಲಕವಾಗಿ ಸುಮಾರು 40 ಲಕ್ಷದ ವೆಚ್ಚದಲ್ಲಿ ಲಯನ್ಸ್ ಹರಿಭವ ಸಭಾಭವನವನ್ನು ನಿರ್ಮಿಸಿ ಸಮಾಜಕ್ಕೆ ಅರ್ಪಿಸುತ್ತಿದೆ.ಈ ಸಭಾಭವನವು ಯಾವುದೇ ಆರ್ಥಿಕ ಲಾಭವನ್ನು ನಿರೀಕ್ಷಿಸದೆ ಸಮಾಜದ ಎಲ್ಲಾ ವರ್ಗದ ಜನರಿಗೆ ಉಪಯುಕ್ತವಾಗಲಿದೆ.

‘ಹರಿಭವ’ ಸಭಾಂಗಣವನ್ನು ಶಿಮುಂಜಿ ಪರಾರಿ ಹರಿಯಪ್ಪ ಶೆಟ್ಟಿ ಮತ್ತು ಕಡಂದಲೆ ಪರಾರಿ ಭವಾನಿ ಶೆಟ್ಟಿ ಇವರ ಸ್ಮರಣಾರ್ಥ ಲಯನ್ ಡಾಕ್ಟರ್ ಕೆ ನಿತ್ಯಾನಂದ ಶೆಟ್ಟಿಯವರು ಪ್ರಾಯೋಜಿಸಿ ದರೆ ‘ಮಂಜುಶ್ರೀ ವೇದಿಕೆಯನ್ನು ‘ ಕಣಂಜಾರು ಪಟ್ಟದ ಮನೆ ಕೃಷ್ಣ ಹೆಗ್ಡೆ ಹಾಗೂ ತಾಳಿಪಾಡಿ ಗುತ್ತು ಸವಿತಾ ಕೆ ಹೆಗ್ಡೆ ಯವರ ಸ್ಮರಣಾರ್ಥ ಲಯನ್ ಶಿವಪ್ರಸಾದ್ ಹೆಗ್ಡೆ ಪ್ರಾಯೋಜಿಸಿರುತ್ತಾರೆ. ಹಾಗೂ ಎಂ ಕೆ ‘ಪದ್ಮನಾಭ ಭವಾನಿ ಡೈನಿಂಗ್ ಹಾಲ್ ‘ನ್ನು ಎಂ ಕೆ ಪದ್ಮನಾಭ ಗೌಡ ಮತ್ತು ಭವಾನಿ, ಕಡೆಪಲ್ಲ, ಗಾಂಧಿನಗರ, ಮೂಡುಬಿದಿರೆ ಇವರ ಸ್ಮರಣಾರ್ಥ ಲಯನ್ ದಿನೇಶ್ ಎಂ. ಕೆ ರವರು ಪ್ರಾಯೋಜಿಸಿರುತ್ತಾರೆ.

ಈ ಎಲ್ಲಾ ಯೋಜನೆಗಳು ದಿನಾಂಕ 25.06.2026 ರಂದು ಗುರುವಾರ ಲೋಕಾರ್ಪಣೆಗೊಳ್ಳಲಿದೆ. ಸಮಾರಂಭದಲ್ಲಿ ಸ್ಥಳೀಯ ಮುಂದಾಳುಗಳು, ಲಯನ್ಸ್ ಜಿಲ್ಲಾ ಪದಾಧಿಕಾರಿಗಳು ಹಾಜರಿರಲ್ಲಿದ್ದಾರೆ ಎಂದು ಲಯನ್ಸ್ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

LEAVE A REPLY

Please enter your comment!
Please enter your name here