ಯಳಂದೂರು: ಪಟ್ಟಣದ ಎಸ್‌ಡಿವಿಎಸ್ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 5ನೇ ತರಗತಿ ವಿದ್ಯಾರ್ಥಿ ಮೇಲೆ ಶಿಕ್ಷಕಿಯೋರ್ವರು ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ.
ಹಲ್ಲೆಗೊಳಗಾದ ವಿದ್ಯಾರ್ಥಿ ಗುರುಪ್ರಸಾದ್ ಎಂದು ತಿಳಿದು ಬಂದಿದೆ. ಹಲ್ಲೆಗೈದ ಶಿಕ್ಷಕಿ ಭಾನುಮತಿ ಎಂದು ತಿಳಿದು ಬಂದಿದೆ. ಶಾಲೆಯಲ್ಲಿ ಮಧ್ಯವಾರ್ಷಿಕ ಪರೀಕ್ಷೆಯು ನಡೆಯುತ್ತಿದ್ದು, ಈ ಸಂದರ್ಭ ಈತ ಶೌಚಾಲಯಕ್ಕೆ ಹೋಗಬೇಕೆಂದು ಶಿಕ್ಷಕಿ ಅನುಮತಿ ಕೇಳಿದ್ದಾನೆ. ಆದರೆ, ಶಿಕ್ಷಕಿ ಈತನಿಗೆ ಅನುಮತಿ ಕೊಟ್ಟಿಲ್ಲ. ಆದರೂ, ಈತ ಶೌಚಾಲಯಕ್ಕೆ ತೆರಳಿದ್ದರಿಂದ ಕೋಪಗೊಂಡ ಶಿಕ್ಷಕಿ ಜಾಮಿಟ್ರಿ ಬಾಕ್ಸ್, ಕಡ್ಡಿ ಹಾಗೂ ಕೈಯಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

