ಕಾರ್ಕಳ: ಸ್ವರ್ಣ ಗ್ರಾಮೀಣ ಸೌಹಾರ್ದ ಸಹಕಾರಿ ಮಿಯ್ಯಾರು; ಮಹಾಸಭೆ

0
121

ಕಾರ್ಕಳ : ಸ್ವರ್ಣ ಗ್ರಾಮೀಣ ಸೌಹಾರ್ದ ಸಹಕಾರಿ ಮಿಯ್ಯಾರು ಇದರ ಮಹಾ ಸಭೆಯು ಇಂದು ಕಾರ್ಕಳದ ಜೋಡು ಕಟ್ಟೆಯಲ್ಲಿ ನಡೆಯಿತು.

ಸಭೆಯ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ವಸಂತ್ ಕುಮಾರ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಸಹಕಾರಿ ರಂಗದ ಮೂಲಕ ಬಹಳಷ್ಟು ಮಂದಿ ಜನತೆ ಅಭಿವೃದ್ಧಿ ಕಂಡಿದ್ದಾರೆ ಎಂದು ಹೇಳಿದರು. ಮಾದಕ ದ್ರವ್ಯದಂತಹ ಅನಿಷ್ಟ ಗಳು ಇಂದು ಗ್ರಾಮೀಣ ಮಟ್ಟಕ್ಕೂ ತಲುಪಿದ್ದು ಜನ ಜಾಗರುಕರಾಗಬೇಕು ಎಂಬ ಜಾಗೃತಿ ಮೂಡಿಸಿದರು.

ಕಾರ್ಕಳದ ಕ್ರೈಂ ಎಸ್.ಐ ಶಿವ ಕುಮಾರ್ ಮಾತನಾಡಿ, ಸಮಾಜದಲ್ಲಿ ನಡೆಯುತ್ತಿರುವ ಕಳ್ಳತನ ಹಾಗೂ ಇನ್ನಿತರ ಸೈಬರ್ ಅಪರಾಧ ಬಗ್ಗೆ ಜಾಗರುಕರಾಗಬೇಕು ಎಂದು ಹೇಳಿದರು. ಮಾಳ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ದಿಶಾ ದಿವಾಕರ್ ಮಾತನಾಡಿ, ಆರೋಗ್ಯ ರಕ್ಷಣೆಗೆ ಪ್ರಥಮ ಆದ್ಯತೆ ನೀಡುವಂತೆ ಮಾಹಿತಿ ನೀಡಿದರು.

ಸಭೆಯ ಅಧ್ಯಕ್ಷ ತೆಯನ್ನು ಸಹಕಾರಿ ಅಧ್ಯಕ್ಷರಾದ ಶೇಕ್ ಶಬೀರ್ ವಹಿಸಿ ಸಂಘದ ಸಾಧನೆ ಮತ್ತು ಅಭಿವೃದ್ಧಿ ಬಗ್ಗೆ ತಿಳಿಸಿದರು. ಸಂಘದ ಉಪಾಧ್ಯಕ್ಷ ಸುಧಾಕರ ಪೂಜಾರಿ, ಆಮ್ ಆದ್ಮಿ ಪಕ್ಷದ ಜಿಲ್ಲಾ ಅಧ್ಯಕ್ಷ ಡೇನಿಯಲ್,ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ತಾರಾನಾಥ್ ಕೋಟ್ಯಾನ್, ಸಹಕಾರಿ ನಿರ್ದೇಶಕರಾದ ರಮೇಶ್ ಶೆಟ್ಟಿ ರೆಂಜಾಳ, ಸತೀಶ್, ಸಂತೋಷ್, ಶಕುಂತಲಾ, ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ನಿರೋಷ ಶೆಟ್ಟಿ, ಸಿಬ್ಬಂದಿ ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು. ನಿರ್ದೇಶಕರಾದ ಉದಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here