ವರದಿ : ಮಂದಾರ ರಾಜೇಶ್ ಭಟ್
ಮಂಗಳೂರಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀ ಮಹಾಗಣಪತಿ ಶ್ರೀ ರಾಮಚಂದ್ರ ದೇವರ ಸನ್ನಿಧಿಯಲ್ಲಿ ಅದ್ದೂರಿಯಾಗಿ 68ನೇ ವರ್ಷದ ಭಜನಾ ವಾರ್ಷಿಕೋತ್ಸವವು ಹಮ್ಮಿಕೊಳ್ಳಲಾಗಿದೆ.
ಶ್ರೀ ಪರಾಭವ ನಾಮ ಸಂವತ್ಸರದ ಮೇಷ ಮಾಸದ ವೈಶಾಖ ಶುದ್ಧ ಏಕಾದಶಿಯ ಶುಭ ದಿನವಾದ ಏಪ್ರಿಲ್ 27, 2026ರ ಸೋಮವಾರ ಸಂಜೆ ಸೂರ್ಯಾಸ್ತಮಾನದಿಂದ ಮರುದಿನ ಸೂರ್ಯೋದಯದವರೆಗೆ ಈ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ.
ಭಜನಾ ಮಹೋತ್ಸವದ ವಿಶೇಷತೆಗಳು
ದೇವಾಲಯದ ಆಡಳಿತ ಮಂಡಳಿ, ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯುವ ಈ ವಾರ್ಷಿಕೋತ್ಸವದಲ್ಲಿ ರಾತ್ರಿಯಿಡೀ ಭಜನಾ ಕಾರ್ಯಕ್ರಮಗಳು ನಡೆಯಲಿವೆ.
ಭಕ್ತಾದಿಗಳು ತನು-ಮನ-ಧನಗಳಿಂದ ಸಹಕರಿಸಿ ಈ ಭಜನಾ ಫಲವನ್ನು ಪಡೆದುಕೊಳ್ಳಬೇಕು ಹಾಗೂ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಸಮಿತಿ ವಿನಂತಿಸಿದೆ.
ಸೇವಾ ವಿವರಗಳು
ಭಜನಾ ಮಹೋತ್ಸವದ ಪ್ರಯುಕ್ತ ಭಕ್ತಾದಿಗಳಿಗೆ ವಿಶೇಷ ಸೇವೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ :
ಇದರೊಂದಿಗೆ ದೇವಸ್ಥಾನದಲ್ಲಿ ಪ್ರತಿ ಮಾಸದ ಪೂರ್ಣಿಮೆಯಂದು ಸಂಜೆ 6:30ಕ್ಕೆ ಸತ್ಯನಾರಾಯಣ ಪೂಜೆ ಹಾಗೂ ಪ್ರತಿ ಸಂಕಷ್ಟಹರ ಚತುರ್ಥಿಯಂದು ಬೆಳಗ್ಗೆ 9:30ಕ್ಕೆ ಗಣಹೋಮವು ನಿರಂತರವಾಗಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕಳೆದ ವರ್ಷದ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ಭಜನಾ ಮಂಡಳಿಗಳಿಗೂ ಹಾಗೂ ಭಕ್ತಾಭಿಮಾನಿಗಳಿಗೂ ದೇವರು ಆಯುರಾರೋಗ್ಯ, ಐಶ್ವರ್ಯವನ್ನು ಅನುಗ್ರಹಿಸಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಲಾಗಿದೆ.
“ಲೋಕಾಃ ಸಮಸ್ತಾಃ ಸುಖಿನೋಭವಂತು” ಎಂಬ ಶುಭಾಶಯದೊಂದಿಗೆ ಸಮಸ್ತ ಭಕ್ತ ಸಮೂಹಕ್ಕೆ ಈ ಮೂಲಕ ಆಮಂತ್ರಣ ನೀಡಲಾಗಿದೆ.

