ಪುತ್ತೂರು ಶಾಸಕರಿಂದ ಖಾಸಗಿ ಜಮೀನಿಗೆ ಅಕ್ರಮ ಪ್ರವೇಶ, ಅತಿಕ್ರಮಣ, ಕಟ್ಟಡ ನಿರ್ನಾಮವನ್ನು ಕೋರ್ಟ್ ರಿಸೀವರ್ ಡಾ. ರವೀಂದ್ರ ರಾವ್ ಕೇದಿಗೆ ಖಂಡನೆ

0
2

ಏಪ್ರಿಲ್ 14ರಂದು ತಡರಾತ್ರಿ ಪುತ್ತೂರು ಪೇಟೆಯ ಮಹಿಳಾ ಪೊಲೀಸ್ ಠಾಣೆಯ ಎದುರಿನ ಕೇದಿಗೆ ವಂಶಕ್ಕೆ ಸೇರಿದ್ದ ಹಳೆಯ ಕಟ್ಟಡವನ್ನು ಪಂಜಿಗುಡ್ಡೆ ಈಶ್ವರ ಭಟ್ ಮತ್ತು ಪುತ್ತೂರು ಕ್ಷೇತ್ರದ ಶಾಸಕರು ಅಕ್ರಮ ಪ್ರವೇಶಿಸಿ, ಕೋರ್ಟ್ ನಲ್ಲಿ ಕೇಸು ನಡೆಯುತ್ತಿದ್ದಾಗಿಯೂ ಕಟ್ಟಡವನ್ನು ಭಾಗಶಹ ಕೆಡವಿ ಹಾಕಲಾಗಿದೆ. ಸುಮಾರು 10 ಎಕರೆ ಜಮೀನು ಬಂಟ್ವಾಳ ತಾಲೂಕಿನ ದೇವಸ್ಯ ಪಡುವರು ಗ್ರಾಮದ ಮೇಲಿನ ಕೇದಿಗೆಯ ಅವಿಭಕ್ತ ಕುಟುಂಬದ ವರ್ಷದಲ್ಲಿರುವ ಸ್ಥಳ ಇದಾಗಿರುತ್ತದೆ. ಕೇದಿಗೆ ಕುಟುಂಬದ ಖಾಸಗಿ ಜಮೀನಿಗೆ ಜೆಸಿಬಿ ಹಾಗೂ ಟಿಪ್ಪರ್ಗಳನ್ನು ನುಗ್ಗಿಸಿ ಸದರಿ ಸ್ಥಳದಲ್ಲಿದ್ದ ಹಳೆಯ ಕಟ್ಟಡವನ್ನು ಕೆಡವಲಾಗಿರುತ್ತದೆ.

ದೈವ ದೇವರುಗಳ ಈ ಸ್ಥಳದಲ್ಲಿ ಕೋರ್ಟ್ ದಿಸೀವರ್ ಅಧೀನದಲ್ಲಿದ್ದಾಗಿಯೂ ಖಾಸಗಿ ಜಮೀನಿಗೆ ಅಕ್ರಮ ಪ್ರವೇಶಿಸಿ ಅತಿಕ್ರಮಣ ಗೈದು ಕಟ್ಟಡ ಕೆಡವಿರುವುದು ನ್ಯಾಯಾಂಗ ನಿಂದನೆಯ ಪ್ರಕರಣ ಆಗಿರುತ್ತದೆ ಈ ಬಗ್ಗೆ ನ್ಯಾಯಾಂಗಕ್ಕೆ ತಿಳಿಸಲಾಗಿದ್ದು ಪಂಜಿಗುಡ್ಡೆ ಈಶ್ವರ ಭಟ್ ಅವರ ಮೇಲೆ ಎಫ್ ಐ ಆರ್ ದಾಖಲಾಗಿರುತ್ತದೆ ಇದಕ್ಕೆ ಕಾರಣಕರ್ತರಾದ ಪುತ್ತೂರು ಶಾಸಕರಿಗೂ ನೋಟಿಸು ನೀಡಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಡಾಕ್ಟರ್ ಅರವಿಂದರಾವ್ ಕೇದಿಗೆ ತಿಳಿಸಿರುತ್ತಾರೆ.

ಪತ್ರಿಕಾಗೋಷ್ಠಿಯಲ್ಲಿ ಕೇದಿಗೆ ಕುಟುಂಬದ ಭವಾನಿ ಶಂಕರ್ ರಾವ್, ಧೀರಜ್, ಮನೋಜ್ ಹಾಗೂ ಸುಮಿತ್ ರಾಜ್ ಹಾಜರಿದ್ದರು.

ವರದಿ ರಾಯಿ ರಾಜ ಕುಮಾರ

LEAVE A REPLY

Please enter your comment!
Please enter your name here