ಕುಲಾಲ ಸಂಘ (ರಿ.), ಪೆರ್ಡೂರು ನಲ್ಲಿ 80 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

0
13

ಉಡುಪಿ : 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಕುಲಾಲ ಸಂಘ (ರಿ.), ಪೆರ್ಡೂರು ಸೇವಾದಳದ ವತಿಯಿಂದ ಇಂದು ಧ್ವಜಾರೋಹಣ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಅಶೋಕ್ ಕುಲಾಲ್ ಕಂಚಿಗುಂಡಿ ಅವರು ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಕಾಳು ಕುಲಾಲ್, ಸೇವಾದಳದ ದಳಪತಿ ಕೃಷ್ಣ ಕುಲಾಲ್ ಪಾಡಿಗಾರ, ಗೌರವಾಧ್ಯಕ್ಷರಾದ ರಾಮ ಕುಲಾಲ್ ಪಕ್ಕಾಲ್, ಗೌರವ ಸಲಹೆಗಾರರಾದ ಕೃಷ್ಣಪ್ಪ ಕುಲಾಲ್ ಹಿರಿಯಡ್ಕ, ಸಂಘದ ಪ್ರಮುಖ ಸದಸ್ಯರು ಹಾಗೂ ಸಮಿತಿ ಸದಸ್ಯರು, ಮಹಿಳಾ ಮಂಡಳಿಯ ಸದಸ್ಯರು ಮತ್ತು ಸೇವಾದಳದ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಗಣೇಶ್ ಕುಲಾಲ್ ಪಕ್ಕಾಲ್ ಅವರು ಅಚ್ಚುಕಟ್ಟಾಗಿ ನಿರೂಪಿಸಿದರು.

ಎಲ್ಲರ ಸಹಕಾರ ಹಾಗೂ ಉಪಸ್ಥಿತಿಯಿಂದ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.