ಸುಕುಮಾರ ಮೋಹನ್

ಮುದ್ರಾಡಿ ನಾಟ್ಕದೂರು :
ಭಕ್ತರನ್ನು ಸಲಹುವ ಮಹಾತಾಯಿ ಅಭಯಹಸ್ತೆ ಶ್ರೀ ಆದಿಶಕ್ತಿ ಶ್ರೀಕ್ಷೇತ್ರ, ಶ್ರೀ ನಂದಿಕೇಶ್ವರ ದೇವಸ್ಥಾನ, ಶ್ರೀ ಬ್ರಹ್ಮಬೈದರ್ಕಳ ಗರಡಿ ಮತ್ತು ಧರ್ಮದೈವಗಳ ಸನ್ನಿಧಿಯಲ್ಲಿ ಆದಿಮುದ್ರೋತ್ಸವ ವರ್ಧಂತಿ ಉತ್ಸವ ಹಾಗೂ ೫೩ನೇ ವರ್ಷದ ನೇಮೋತ್ಸವ ಇದೇ ಎಪ್ರಿಲ್ 5 ರಿಂದ 10 ರ ತನಕ ಭಕ್ತಿ ವೈಭವದಿಂದ ನಡೆಯಲಿದೆ. ಆದಿಮುದ್ರೋತ್ಸವಕ್ಕೆ ಶ್ರೀಕ್ಷೇತ್ರ ಮುದ್ರಾಡಿ ಸಜ್ಜಾಗಿದೆ ಎಂದು ಶ್ರೀಕ್ಷೇತ್ರದ ಧರ್ಮಾಧಿಕಾರಿ ವಿಜಯಕೀರ್ತಿ ಧರ್ಮಯೋಗಿ ಶ್ರೀ ಸುಕುಮಾರ್ ಮೋಹನ್ ತಿಳಿಸಿದರು.
ಶ್ರೀಕ್ಷೇತ್ರದ ಗೌರವಾಧ್ಯಕ್ಷ ಕಮಲಾಕ್ಷ ಕಾಮತ್ ಕಾರ್ಕಳ, ಅಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಮಾರ್ಗದರ್ಶನದಲ್ಲಿ ಮೋಕ್ತೆಸರರಾದ ಸುಧೀಂದ್ರ ಮೋಹನ್, ಸುರೇಂದ್ರ ಮೋಹನ್, ಉಮೇಶ್ ಕಲ್ಮಾಡಿ ಸಹಕಾರದಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದೆ.
ಶ್ರೀ ನಂದಿಕೇಶ್ವರ

ಆದಿಮುದ್ರೋತ್ಸವ :
ಎಪ್ರಿಲ್ 5 : ಬೆಳಿಗ್ಗೆ ಗ್ರಾಮದೇವತಾ ಪ್ರಾರ್ಥನೆ, ನಿತ್ಯ ಪೂಜೆ ಬಳಿಕ 8 ಗಂಟೆಯಿಂದ ಸಂಪತ್ ಪ್ರದ ಶ್ರೀಸೂಕ್ತ ಹೋಮ ನಡೆಯಲಿದೆ. ಸಂಜೆ 6ಕ್ಕೆ ಭಂಡಾರ ಇಳಿದು ಪಿಲಿ ಚಾಮುಂಡಿ ಬಂಟ ನೇಮ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ.
ಎಪ್ರಿಲ್ ೦6 : ಬೆಳಿಗ್ಗೆ ಭಕ್ತರ ಇಷ್ಟಾರ್ಥ ಸಿದ್ಧಿಗೆ ಸಹಸ್ರ ಕದಳಿ ಹೋಮ ನಡೆಯಲಿದೆ. ಸಂಜೆ 6ಕ್ಕೆ ಭಂಡಾರ ಇಳಿದು ಧರ್ಮರಸು ಕೊಡಮಣಿತ್ತಾಯ ಕುಕ್ಕಿನಂತಾಯ ನೇಮ, ಬ್ರಹ್ಮಬೈದರ್ಕಳಿಗೆ ಅಗೆಲು ಸೇವೆ, ದರ್ಶನ ಮುಖಾವಲಿ, ಅನ್ನ ದಾಸೋಹ ನಡೆಯಲಿದೆ.
ಶ್ರೀ ಆದಿಶಕ್ತಿ

ಎಪ್ರಿಲ್ ೦7 : 8 ಗಂಟೆಯಿಂದ ಕಾರ್ಯಸಿದ್ಧಿ ಅಥರ್ವ ಸೀರ್ಷ ಗಣಪತಿ ಯಾಗ ನಡೆಯಲಿದೆ. ಸಂಜೆ 7 ಕ್ಕೆ ತರ್ಸಲೆ ಹೊರಟು ಬ್ರಹ್ಮಬೈದರ್ಕಳ ನೇಮ, ದೀಪೋತ್ಸವ, 11 ಗಂಟೆಗೆ ಮಾಯಂದಲಮ್ಮ ನೇಮ, ಕೋಟಿ ಚೆನ್ನಯ್ಯ ಮತ್ತು ಶ್ರೀದೇವಿ ದರ್ಶನ ಮುಖಾವಲಿ ಸುತ್ತುಬಲಿ. ಬೆಳಿಗ್ಗೆ 6 ಕ್ಕೆ ಜೋಗಿ ಪುರುಷನೇಮ ನಡೆಯಲಿದೆ.
ಎಪ್ರಿಲ್ ೦8 : ಭಕ್ತರ ಧನಕನಕ ಅಭಿವೃದ್ಧಿಗಾಗಿ ಲಕ್ಷ್ಮೀನಾರಾಯಣ ಹೃದಯ ಹೋಮ ನಡೆಯಲಿದೆ. ಸಂಜೆ 6 ರಿಂದ ಮೂಲಮೈಸಂದಾಯ ರಕ್ತೇಶ್ವರಿ, ಜಾಲಬೈಕಡ್ತಿ, ಪಟ್ಟದಪಂಜುರ್ಲಿ, ಜುಮಾದಿ ಬಂಟ, ಕಲ್ಕುಡ ಕಲ್ಲುರ್ಟಿ ಕೋಲ ಮತ್ತು ದೇವಿ ದೈವಗಳ ಮುಖಾವಲಿ ನಡೆಯಲಿದೆ.
ಎಪ್ರಿಲ್ ೦9 : ಬೆಳಿಗ್ಗೆ 6 ರಿಂದ ಗುಳಿಗ ಚಾಮುಂಡಿ, ಸಂಜೆ ೭ ರಿಂದ ಬೊಬ್ಬರ್ಯ, ಮಲೆಸಾವಿರ ಮತ್ತು ಕೊರಗಜ್ಜ ಕೋಲ ನಡೆಯಲಿದೆ.
” ಅಭಯಗಂಟೆ ವಿಶೇಷ – ಹೆಜ್ಜೆ ನಮಸ್ಕಾರ “
ಕ್ಷೇತ್ರದ ನಂದಿಕೇಶ್ವರನಿಗೆ ಭಕ್ತಿಯಿಂದ “ಹೆಜ್ಜೆ ನಮಸ್ಕಾರ” ಹಾಕಿದರೆ ಮತ್ತು ಮಹಾತಾಯಿ ಶ್ರೀ ಆದಿಶಕ್ತಿಯನ್ನು ವಿಶೇಷ ನಂಬಿಕೆ ಭಕ್ತಿಯಿಂದ ಪ್ರಾರ್ಥಿಸಿ ಕ್ಷೇತ್ರದಲ್ಲಿ ತುಪ್ಪದ ದೀಪ ಹಚ್ಚಿ “ಅಭಯಘಂಟೆ” ಭಾರಿಸಿದರೆ ಸಕಲ ಇಷ್ಟಾರ್ಥಗಳು 48 ದಿನಗಳಲ್ಲಿ ಈಡೇರುತ್ತದೆ. ಪರಿಹಾರವಾಗದ ಸಮಸ್ಯೆಗಳು, ಆರೋಗ್ಯ ಸಮಸ್ಯೆಗಳು, ಮದುವೆ ವಿಳಂಬ, ದೋಷಗಳು, ಕಷ್ಟ ನೋವು, ಉದ್ಯೋಗ ಸಮಸ್ಯೆಗಳು ಸೇರಿ ಯಾವೂದೇ ಸಮಸ್ಯೆಗಳಿದ್ದರೂ ನಿವಾರಣೆ ಮಾಡಿ ತಾಯಿ ಹರಸುತ್ತಾಳೆ ಧರ್ಮಯೋಗಿ ಶ್ರೀ ಸುಕುಮಾರ್ ಮೋಹನ್ ತಿಳಿಸಿದರು.
