ಆ8 : ವರ್ಲಿ ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ ಆಶ್ರಯದಲ್ಲಿ ತುಳುನಾಡ ಸಂಸ್ಕೃತಿದ ಆಟಿದ ಕೂಟ

0
12

ಮುಂಬಯಿ : ವರ್ಲಿ ಮಧುಸೂದನ್ ಮಿಲ್ಕ್ ಕಾಂಪೌಂಡಿನಲ್ಲಿ ಅತಿ ಪುರಾತನ ಕ್ಷೇತ್ರ ಶ್ರೀ ಸಿದ್ದೇಶ್ವರ ಕ್ಷೇತ್ರದಲ್ಲಿ ಪಡುಬಿದ್ರಿ ಬೆಂಗ್ರೆ ಕೈವಲ್ಯ ರಮೇಶ್ ಗುರುಸ್ವಾಮಿ ಅವರು ಸ್ಥಾಪಿಸಿರುವ ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ ನ ಅನ್ನಪೂರ್ಣೇಶ್ವರಿ ಮಹಿಳಾ ವಿಭಾಗದ ಆಶ್ರಯದಲ್ಲಿ ತುಳುನಾಡ ಸಂಸ್ಕೃತಿದ ಆಟಿದ ಕೂಟ ಆ 8 ಶನಿವಾರ ಸಂಜೆ 6 ಗಂಟೆಗೆ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.

ಫೌಂಡೇಶನ್ನ ಆಡಳಿತ ವಿಶ್ವಸ್ಥರಾದ ಶಾಂಭವಿ ಆರ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ,ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ ಅಧ್ಯಕ್ಷ ಪದ್ಮನಾಭ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ,ಅನ್ನಪೂರ್ಣೇಶ್ವರಿ ಮಹಿಳಾ ವಿಭಾಗದ ಕಾರ್ಯ ಧ್ಯಕ್ಷೆ ಕವಿತಾ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಆಟಿ ತಿಂಗಳ ಹಿಂದಿನ ನೆನಪುಗಳು ಬಗ್ಗೆ ಮಾತನಾಡಲಿದ್ದಾರೆ ಖ್ಯಾತ ವಾಗ್ಮಿ ಯಕ್ಷಗಾನ ಕಲಾವಿದ ಸಂಘಟಕ ವಾಸುದೇವ ಶೆಟ್ಟಿ ಮಾರ್ನಾಡ್ ಯವರು ,
ಬಳಿಕ ಮಹಿಳೆಯರಿಂದ ವಿಭಿನ್ನ ರೀತಿಯ ಮನೆಯಲ್ಲಿ ಮಾಡಿದ ಖ್ಯಾತೆ ಗಳು ಆಗಮಿಸಿದ ಎಲ್ಲರಿಗೂ ನೀಡಲಿದ್ದಾರೆ.

ಪ್ರಾರಂಭದಲ್ಲಿ ಭಜನೆ ಬಳಿಕ ಮಂಗಳಾರತಿ ನಡೆದ ಬಡಿಕ ಕಾರ್ಯಕ್ರಮ ನಡೆಯಲಿದೆ ಈ ಎಲ್ಲಾ ಕಾರ್ಯಕ್ರಮದಲ್ಲಿ ಪೌಂಡೇಶನ್ ಸರ್ವ ಬಂಧುಗಳು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಸಂಸ್ಥಾಪಕರು, ಆಡಳಿತ ಮಂಡಳಿ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ವಿಭಾಗದ ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ.