ಯುವ ಗಾಯಕರಿಗೆ ಆಹ್ವಾನ: ಏಪ್ರಿಲ್ 19ರಿಂದ ಗಾನ ಶಾರದೇ ಸ್ಪರ್ಧೆ ಆರಂಭ

0
20

ಆರ್.ಪಿ ಕಲಾ ಸೇವಾ ಟ್ರಸ್ಟ್, ಪಾಂಬಾರು (ರಿ) ವತಿಯಿಂದ “ಗಾನ ಶಾರದೇ ಗಾಯನ ಸ್ಪರ್ಧೆ”ಯನ್ನು ಆಯೋಜಿಸಲಾಗುತ್ತಿದೆ. ಈ ಸ್ಪರ್ಧೆ ಯುವ ಗಾಯಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸುವರ್ಣ ಅವಕಾಶ ಒದಗಿಸುತ್ತದೆ.

ಸ್ಪರ್ಧೆಯ ಆಡಿಷನ್ ಸುತ್ತು ಏಪ್ರಿಲ್ 19ರಂದು ನಡೆಯಲಿದ್ದು, ಭಾಗವಹಿಸಲು ಆಸಕ್ತರು ಶೀಘ್ರದಲ್ಲೇ ಹೆಸರು ನೋಂದಾಯಿಸಿಕೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.

ಸ್ಪರ್ಧೆಯನ್ನು ಜೂನಿಯರ್ (7 ರಿಂದ 14 ವರ್ಷ) ಮತ್ತು ಸೀನಿಯರ್ (14 ವರ್ಷ ಮೇಲ್ಪಟ್ಟು) ಎಂಬ ಎರಡು ವಿಭಾಗಗಳಲ್ಲಿ ನಡೆಸಲಾಗುತ್ತದೆ. ಜೂನಿಯರ್ ವಿಭಾಗದವರಿಗೆ ಆಧಾರ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗಿದೆ.

ಒಟ್ಟು ನಾಲ್ಕು ಹಂತಗಳಲ್ಲಿ ಸ್ಪರ್ಧೆ ನಡೆಯಲಿದೆ — ಆಡಿಷನ್, ಪ್ರಥಮ ಸುತ್ತು, ಸೆಮಿಫೈನಲ್ ಮತ್ತು ಫೈನಲ್. ಪ್ರಥಮ ಹಂತದಲ್ಲಿ ಆಡಿಯೋ ಮೂಲಕ ಹಾಗೂ ಸೆಮಿಫೈನಲ್ ಹಂತದಲ್ಲಿ ವಿಡಿಯೋ ಮೂಲಕ ಹಾಡನ್ನು ಸಲ್ಲಿಸಬೇಕು. ಸ್ಪರ್ಧಿಗಳು ಕರೋಕೆ ಬಳಸದೆ ಒಂದು ಹಾಡಿನ ಪಲ್ಲವಿ ಹಾಗೂ ಚರಣವನ್ನು ಹಾಡಿ ಕಳುಹಿಸಬೇಕಾಗಿದೆ.

ವಿಜೇತರಿಗೆ “ಗಾನ ಶಾರದೇ” ಟ್ರೋಫಿಯೊಂದಿಗೆ ನಗದು ಬಹುಮಾನ ನೀಡಲಾಗುತ್ತದೆ. ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳ ಜೊತೆಗೆ 10 ಸಮಾಧಾನಕರ ಬಹುಮಾನಗಳನ್ನೂ ನೀಡಲಾಗುತ್ತದೆ.

ಸೀನಿಯರ್ ವಿಭಾಗದವರಿಗೆ ₹100 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ಗೂಗಲ್ ಪೇ ಮೂಲಕ ಪಾವತಿಸಬೇಕು. ನೋಂದಣಿ ಬಳಿಕ ಸ್ಪರ್ಧಿಗಳ ವಾಟ್ಸಪ್ ಗುಂಪಿಗೆ ಸೇರಿಸಲಾಗುತ್ತದೆ.

ಈ ಸ್ಪರ್ಧೆ ಹಾಡುವ ಕೋಗಿಲೆಗಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಉತ್ತಮ ವೇದಿಕೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಕರೆ ನೀಡಿದ್ದಾರೆ.

14 ಒಳಗೆ ಜೂನಿಯರ್ ವಿಭಾಗ ಉಚಿತ ಪ್ರವೇಶ ಹೆಸರು ಅದರ್ & ಹೆಸರು ನೋಂದಹಿಸಲು 👉🏼👉🏼87629 60649 .

LEAVE A REPLY

Please enter your comment!
Please enter your name here