ಸಂಗೀತ ಎನ್ನುವುದು ಒಂದು ಆಧ್ಯಾತ್ಮಿಕ ಪರಂಪರೆಯ ಕಲೆ- ಶಶಿಕಲ ಜಿ.ಮಯ್ಯ

0
63

ದಾವಣಗೆರೆ : ಮಾನವರಿಗೆ ಮಾನಸಿಕವಾಗಿ ನೆಮ್ಮದಿಗೆ ಜ್ಞಾನವರ್ಧನೆಗೆ ಸಂಗೀತ ಎನ್ನುವುದು ಒಂದು ಆಧ್ಯಾತ್ಮಿಕ ಪರಂಪರೆಯ ಕಲೆ, ಮಕ್ಕಳ ವಿದ್ಯಾಭ್ಯಾಕ್ಕೆ ಇದು ಚಿಕಿತ್ಸಾ ಪದ್ಧತಿ.ವಿದ್ಯಾರ್ಥಿಗಳ ಮುಂದಿನ ದಿವ್ಯ, ಭವ್ಯ, ಭವಿಷ್ಯಕ್ಕೆ ಈ ಸುಗಮ ಸಂಗೀತ ಕಾರ್ಯಾಗಾರ ನಾಂದಿ ಎಂದು ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಶಿಕಲ ಜಿ.ಮಯ್ಯ ಯವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದಾವಣಗೆರೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆಯ ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಆಶ್ರಯದಲ್ಲಿ ಇತ್ತೀಚಿಗೆ ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿಯ ಏಕಾಹ ಭಜನಾ ಮಂದಿರದಲ್ಲಿ ಮಕ್ಕಳ ಎರಡು ದಿನಗಳ ಕಾಲ ಸುಗಮ ಸಂಗೀತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ನಿವೃತ್ತ ಮುಖ್ಯೋಪಾಧ್ಯಾಯರಾದ ರಾಧಾಕೃಷ್ಣ ತುಂಗ ಜ್ಯೋತಿ ಬೆಳಗುವುದರೊಂದಿಗೆ ಉದ್ಘಾಟಿಸಿ ಮಾತನಾಡಿ ಮಕ್ಕಳಿಗೆ ಶುಭ ಹಾರೈಸಿದರು.

ಸಂಗೀತ ಸಂಪನ್ಮೂಲ ವ್ಯಕ್ತಿಗಳಾದ ಪುತ್ತೂರಿನ ವಿದುಷಿ ಸುಮನಾರಾವ್ ಮತ್ತು ಕುಮಾರಿ ಸುಪ್ರಜಾ ರಾವ್ ಇವರುಗಳು ಜ್ಞಾನ ಆದಿ ದೇವತೆ ಶ್ರೀ ಶಾರದಾ ದೇವಿಯ ಕುರಿತಾದ ಹಾಡುಗಳು, ದುರ್ಗಾಸ್ತುತಿಯಾದ “ಆಯಿಗಿರಿ ನಂದಿನಿ’ಯ 21 ಶ್ಲೋಕಗಳು, ಸುಗಮ ಸಂಗೀತ ಕಾರ್ಯಾಗಾರವನ್ನು ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ನಡೆಸಿಕೊಟ್ಟರು. ಮಕ್ಕಳಿಗೆ, ಪೋಷಕರಿಗೆ ತುಂಬಾ ಸಂತೋಷವಾಯಿತು ಎಂದು ವ್ಯಕ್ತಪಡಿಸಿದರು.

ಈ ಶಿಬಿರದಲ್ಲಿ ಭಾಗವಹಿಸಿದ ಅಭಿನಂದನಾ ಪತ್ರ, ಬಹುಮಾನಗಳನ್ನು ವಿತರಿಸಲಾಯಿತು ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಯವರು ತಿಳಿಸಿದರು.

ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಸಂಸ್ಥಾಪಕರಾದ ಜಯಲಕ್ಷ್ಮಿ ಕಾರಂತ್, ಶ್ರೀರಾಮ ಕಾರಂತ್, ತಾರಾ ಪ್ರವೀಣ್ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ದಿವ್ಯಾ ಚಂದನ್ ಕಾರಂತ್ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಅತ್ಯದ್ಬುತ ಕಾರ್ಯಾಗಾರ ಸಮಾರಂಭದಕ್ಕೆ ಜಯಲಕ್ಷ್ಮೀ ಆರ್. ಹೊಳ್ಳ ಅಚುಕಟ್ಟಾಗಿ ನಿರೂಪಿಸಿದರು. ಕೊನೆಯಲ್ಲಿ ಚಂದನ್ ಕಾರಂತ್ ವಂದಿಸಿದರು.

LEAVE A REPLY

Please enter your comment!
Please enter your name here