ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸದ್ಯದಲ್ಲಿಯೇ ಸ್ಥಾಪನೆ

0
58

ವರದಿ ರಾಯಿ ರಾಜ ಕುಮಾರ

ದಕ್ಷಿಣ ಕನ್ನಡ ಜಿಲ್ಲೆಯ ಪರಿಸರದ ಎಲ್ಲ ಜಿಲ್ಲೆಗಳ ಉಪಯೋಗಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠವನ್ನು ಸ್ಥಾಪಿಸಲು ಕಳೆದ ಎರಡು ವರ್ಷಗಳಿಂದ ಸಾಕಷ್ಟು ಪ್ರಯತ್ನಗಳು ನಡೆಯುತ್ತಿದೆ. ಅದರ ಅಂಗವಾಗಿ ಇತ್ತೀಚೆಗೆ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರನ್ನು ಭೇಟಿಯಾಗಿ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡುವ ಭರವಸೆಯನ್ನು ನೀಡಲಾಗಿರುತ್ತದೆ. ಸರಕಾರವು ಕೂಡ ನಮ್ಮ ಕೇಳಿಕೆಗೆ ಒಪ್ಪಿಗೆಯನ್ನು ನೀಡಿರುತ್ತದೆ. ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರು ಸದ್ಯದಲ್ಲಿಯೇ ನಾವು ತಿಳಿಸಿರುವ ಮಂಗಳೂರಿನ ಮುಖ್ಯ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿರುವ ಸೌಲಭ್ಯಗಳ ಬಗ್ಗೆ ಸ್ವತಹ ಪರಿಶೀಲಿಸಿ ಅಭಿಪ್ರಾಯವನ್ನು ತಿಳಿಸುವ ಭರವಸೆಯನ್ನು ನೀಡಿರುತ್ತಾರೆ.

ಆ ಪ್ರಕಾರದಲ್ಲಿ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲೆ ಹಳೆಯ ಡಿಸಿ ಕಚೇರಿಯ ಇಡೀ ಪರಿಸರ ಅಥವಾ ಜಿಲ್ಲಾ ಕಾರಾಗ್ರಹದ ಪರಿಸರ ಅಥವಾ ದಕ್ಷಿಣ ಕನ್ನಡ ಉಡುಪಿ ಜಿಲ್ಲಾ ಮಧ್ಯದ ಮುಲ್ಕಿ ಪರಿಸರದಲ್ಲಿ ಯಾವುದು ಸೂಕ್ತವಾಗುತ್ತದೆ ಆ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಲು ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಿಗೆ ಸೂಚಿಸಿರುತ್ತೇವೆ. ಅವರ ಅಭಿಪ್ರಾಯ ಅನುಸರಿಸಿಕೊಂಡು ಸರಕಾರದಿಂದ ಅನುಮತಿಯನ್ನು ಕೂಡ ಪಡೆದು ಸಂಬಂಧ ಪಟ್ಟ ಸ್ಥಳವನ್ನು ಹೈಕೋರ್ಟ್ ಪೀಠಕ್ಕೆ ಒದಗಿಸಿಕೊಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಸಂಚಾಲಕ ಐವನ್ ಡಿಸೋಜಾ ಅವರು ಮೇ 2 ರಂದು ಮಂಗಳೂರಿನ ತಮ್ಮ ಕಚೇರಿಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಶಾಸಕದೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಯ ಸರಕಾರಿ ವಕೀಲ ಎಂ ಪಿ ಗೌಡ, ಮಂಗಳೂರು ಬಾರ್ ಅಸೋಸಿಯೇಷನ್ ಕಾರ್ಯದರ್ಶಿ ಶ್ರೀಧರ್, ಮಾಜಿ ಕಾರ್ಪೊರೇಟರ್ ಪನಿಕ್ಕರ್ ಉಪಸ್ಥಿತರಿದ್ದರು.
.

LEAVE A REPLY

Please enter your comment!
Please enter your name here