ದಾವಣಗೆರೆ : ದಾವಣಗೆರೆಯ ಶ್ರೀ ಗಾಯತ್ರಿ ಪರಿವಾರದ ನೂತನ ಅಧ್ಯಕ್ಷರಾದ ವಾಸುದೇವ ಲಕ್ಷ್ಮ ಣ್ ರಾಯ್ಕರ್ರವರಿಗೆ ಇತ್ತೀಚಿಗೆ ದಾವಣಗೆರೆಯ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠದ ಸಭಾಂಗಣದಲ್ಲಿ ಶ್ರೀ ಗಾಯತ್ರಿ ಸ್ಮರಣಿಕೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ಶೆಣೈ ತಿಳಿಸಿದ್ದಾರೆ.
ಬುದ್ದ ಪೂರ್ಣಿಮೆಯ ಶ್ರೀ ಗಾಯತ್ರಿ ಪೂಜೆ ಉಪಾಸನೆಯ ಈ ಆಧ್ಯಾತ್ಮ ಪರಂಪರೆಯ ಸಮಾರಂಭದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಲಾಕುಂಚ, ಶ್ರೀ ಗಾಯತ್ರಿ ಪರಿವಾರದ ಗೌರವ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್, ಕಲಾಕುಂಚ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್, ಗಾಯಿತ್ರಿ ಪರಿವಾರದ ಸಂಚಾಲಕರಾದ ಭಾವನ್ನಾರಾಯಣ, ಸತೀಶ್ ಆರ್.ಎಂ., ವಿಕ್ರಂಜೈನ್, ಚನ್ನಬಸಪ್ಪ ಶೀಲವಂತ, ಪರಿವಾರದ ಸತ್ಯನಾರಾಯಣ ಮೂರ್ತಿ, ಲೋಹಿತಾಶ್ವ, ಶಾಂತಾರಾಮ, ಆಶಾ ನಿತೀನ್ ಕಾಮತ್, ಯಕ್ಷರಂಗ ಯಕ್ಷಗಾನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬೇಳೂರು ಸಂತೋಷ್ಕುಮಾರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಶ್ರೀ ಗಾಯತ್ರಿ ಪರಿವಾರ, ಕಲಾಕುಂಚ, ಯಕ್ಷರಂಗ ಯಕ್ಷಗಾನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸರ್ವ ಸದಸ್ಯರು ವಾಸುದೇವ ಲಕ್ಷ್ಮ ಣ್ ರಾಯ್ಕರ್ರವರಿಗೆ ಅಭಿಮಾನದಿಂದ ಅಭಿನಂದಿಸಿದರು.

