ಚಿತ್ರಾಪು ವಾಸು ಪೂಜಾರಿಯವರ 40ನೇ ವೈವಾಹಿಕ ಜೀವನದ ಸಂಭ್ರಮ

0
66

ಚಿತ್ರಾಪು ವಾಸು ಪೂಜಾರಿಯವರ 40ನೇ ವೈವಾಹಿಕ ಜೀವನದ ಸಂಭ್ರಮ ದಾಂಪತ್ಯ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಯಿಂದ ಇರಬೇಕಾದರೆ ಪೂರ್ವ ಜನ್ಮದ ಒಳ್ಳೆಯ ಫಲ ಇದ್ದೇ ಇರುತ್ತದೆ. ಅದರಂತೆ ಚಿತ್ರಾಪು ವಾಸು ಪೂಜಾರಿ ಮತ್ತು ವನಜಾಕ್ಷಿಯವರ 40ನೇ ವರ್ಷದ ವೈವಾಹಿಕ ಜೀವನದಲ್ಲಿ ಸಂತೃಪ್ತಿಯನ್ನು ತಂದ ದಂಪತಿಗಳು ಇನ್ನು ಮುಂದಿನ ವರ್ಷಗಳಲ್ಲಿ ಸುಖ, ಶಾಂತಿ, ನೆಮ್ಮದಿಗಳಿಂದ ಜೀವನ ನಡೆಸಲಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಡಾ|| ಹರಿಕೃಷ್ಣ ಪುನರೂರುರವರು ದೀಪ ಪ್ರಜ್ವಲಿಸಿ, ಮಾತನಾಡಿದರು.

ಸಮಾಜ ಸೇವಾ ಕಾರ್ಯಕರ್ತ ವಾಸು ಪೂಜಾರಿ ಮತ್ತು ಅವರ ಧರ್ಮಪತ್ನಿ ವನಜಾಕ್ಷಿಯವರ ವೈವಾಹಿಕ ಜೀವನದ 40ನೇ ವರ್ಷದ ಸಂಭ್ರಮ ಆಚರಣೆಯು ದಿನಾಂಕ 30/04/2026ರಂದು ಚಿತ್ರಾಪಿನ ತನ್ನ ಸ್ವಂತ ಮನೆಯಲ್ಲಿ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಹೊಸ ಅಂಗಣ ಮಾಸ ಪತ್ರಿಕೆಯ ಸಂಪಾದಕರು ಡಾ|| ಹರಿಶ್ಚಂದ್ರ ಪಿ. ಸಾಲ್ಯಾನ್, ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಡಾ|| ಜಗದೀಶ್, ಕೆ. ಎಂ. ಕೋಟ್ಯಾನ್ ಮುಂಬೈ, ಆರ್. ಕೆ. ಬಂಗೇರ, ಶೇಖರ್ ಸಾಲ್ಯಾನ್, ರಾಘು ಸಾಲ್ಯಾನ್, ಬಾಬು ಪೂಜಾರಿ, ಜಯ ಪೂಜಾರಿ, ಶೇಖರ್ ಸುವರ್ಣ, ವಾಸು ಎಸ್. ಪೂಜಾರಿ ಕೊಲಕಾಡಿ, ಕೇಶವ ಕೋಟ್ಯಾನ್, ಆನಂದ ಸನಿಲ್, ಧನಪಾಲ್ ಪುತ್ರನ್, ಪಿ.ವಿ. ಜಗದೀಶ್, ನಾಗಭೂಷಣ್ ಮಯ್ಯ ಮತ್ತು ಊರ ಪರವೂರ ಬಂಧು ಮಿತ್ರರು ಕಾರ್ಯಕ ್ರಮದಲ್ಲಿ ಭಾಗಿಯಾಗಿದ್ದರು. ಡಾ|| ವಾಣಿ ಸ್ವಾಗತಿಸಿದರು, ವಾಸು ಪೂಜಾರಿ ವಂದಿಸಿದರು.

LEAVE A REPLY

Please enter your comment!
Please enter your name here