ಲಕ್ಕುಂಡಿಯಲ್ಲಿ ಹೊಯ್ಸಳ ಶೈಲಿಯ ಪ್ರಾಚ್ಯ ಅವಶೇಷ ಪತ್ತೆ..!

0
31

Lakkundi : ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಪ್ರಾಚ್ಯ ಅವಶೇಷ ಅನ್ವೇಷಣೆ ಸಪ್ತಾಹದ ವೇಳೆ ಗುರುವಾರ ದುರ್ಗಾದೇವಿ ಕೆರೆಯಲ್ಲಿ ಹೊಯ್ಸಳ ಶೈಲಿಯ ಎರಡು ಅಪರೂಪದ ಪ್ರಾಚ್ಯ ಅವಶೇಷಗಳು ಪತ್ತೆಯಾಗಿವೆ.

ಕಲಾತ್ಮಕ ಕೆತ್ತನೆಗಳಿಂದ ಕೂಡಿರುವ ಈ ಶಿಲ್ಪಗಳಲ್ಲಿ ವಾದ್ಯ ನುಡಿಸುತ್ತಿರುವ ಪುರುಷ ಹಾಗೂ ನೃತ್ಯ ಭಂಗಿಯಲ್ಲಿರುವ ಸ್ತ್ರೀಯ ಚಿತ್ರಣ ಕಾಣಸಿಗುತ್ತದೆ.

ಒಂದು ಶಿಲ್ಪದಲ್ಲಿ ಪುರುಷ ಮದ್ದಳೆ ಬಾರಿಸುತ್ತಿದ್ದು, ಅದಕ್ಕೆ ಸ್ತ್ರೀ ನೃತ್ಯ ಮಾಡುತ್ತಿರುವ ದೃಶ್ಯವಿದೆ. ಮತ್ತೊಂದು ಶಿಲ್ಪದಲ್ಲಿ ಪುರುಷ ವೇಣುವಾದನದಲ್ಲಿ ತಲ್ಲೀನನಾಗಿದ್ದರೆ, ಮಹಿಳೆ ನೃತ್ಯ ನಿರತಳಾಗಿರುವ ಸುಂದರ ಕೆತ್ತನೆ ಗಮನ ಸೆಳೆಯುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಮಿತಿ ಸದಸ್ಯ Siddu Patil, “ಈ ಪ್ರಾಚ್ಯ ಅವಶೇಷಗಳ ಕೆತ್ತನೆ ಗಮನಿಸಿದರೆ ಹೊಯ್ಸಳರ ಶೈಲಿಯ ಸ್ಪಷ್ಟ ಪ್ರಭಾವ ಕಾಣಿಸುತ್ತದೆ” ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here