ವಿಕಾಸ ಸಂಭ್ರಮ : ಗುಬ್ಬಿಯಲ್ಲಿ ಮೇ 24ಕ್ಕೆ ಸಾಧಕರಿಗೆ ಗೌರವ ಹಾಗೂ ಪ್ರತಿಭಾ ಪುರಸ್ಕಾರ

0
20

ತುಮಕೂರು : ಇದೇ ತಿಂಗಳು 24ರಂದು ಗುಬ್ಬಿಯ ಶ್ರೀ ಚಿದಂಬರ ಆಶ್ರಮದಲ್ಲಿ ವಿಕಾಸ ಸಂಘಟನೆಯ ವತಿಯಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. SSLC ಮತ್ತು PUC ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಉತ್ತೀರ್ಣರಾದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. (ಗಮನಿಸಿ: ಕಾರ್ಯಕ್ರಮಕ್ಕೆ ಹಾಜರಾಗುವ ಮಕ್ಕಳಿಗೆ ಮಾತ್ರ ).

​ಹಿರಿಯ ಕ್ರೀಡಾ ಪತ್ರಕರ್ತ ದಿ. ವಿನಾಯಕ ದೇಶಪಾಂಡೆ ಅವರ ಸ್ಮರಣಾರ್ಥ ಅರ್ಹ ಕ್ರೀಡಾ ಪತ್ರಕರ್ತರೊಬ್ಬರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ‘ನಮ್ಮ ಹಿರಿಯರು-ನಮ್ಮ ಹೆಮ್ಮೆ’ ಮಾಲಿಕೆಯಲ್ಲಿ ಮಾಧ್ಯಮ ಕ್ಷೇತ್ರದ ಹಿರಿಯರನ್ನು ಹಾಗೂ ಸಾಧಕ ಯುವ ಮಿತ್ರರನ್ನು ಸನ್ಮಾನಿಸಲಾಗುವುದು.

​ ಹಿಂದಿನ ದಿನ ಬರುವವರಿಗೆ ಆಶ್ರಮದ ವಿದ್ಯಾರ್ಥಿ ನಿಲಯದಲ್ಲಿ ವಸತಿ ವ್ಯವಸ್ಥೆ ಇರಲಿದೆ. ಅರ್ಹರ ಹೆಸರುಗಳನ್ನು ಶಿಫಾರಸು ಮಾಡಲು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಟೀಂ ವಿಕಾಸ ಕೋರಿದೆ.

LEAVE A REPLY

Please enter your comment!
Please enter your name here