ತುಮಕೂರು : ಇದೇ ತಿಂಗಳು 24ರಂದು ಗುಬ್ಬಿಯ ಶ್ರೀ ಚಿದಂಬರ ಆಶ್ರಮದಲ್ಲಿ ವಿಕಾಸ ಸಂಘಟನೆಯ ವತಿಯಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. SSLC ಮತ್ತು PUC ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಉತ್ತೀರ್ಣರಾದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. (ಗಮನಿಸಿ: ಕಾರ್ಯಕ್ರಮಕ್ಕೆ ಹಾಜರಾಗುವ ಮಕ್ಕಳಿಗೆ ಮಾತ್ರ ).
ಹಿರಿಯ ಕ್ರೀಡಾ ಪತ್ರಕರ್ತ ದಿ. ವಿನಾಯಕ ದೇಶಪಾಂಡೆ ಅವರ ಸ್ಮರಣಾರ್ಥ ಅರ್ಹ ಕ್ರೀಡಾ ಪತ್ರಕರ್ತರೊಬ್ಬರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ‘ನಮ್ಮ ಹಿರಿಯರು-ನಮ್ಮ ಹೆಮ್ಮೆ’ ಮಾಲಿಕೆಯಲ್ಲಿ ಮಾಧ್ಯಮ ಕ್ಷೇತ್ರದ ಹಿರಿಯರನ್ನು ಹಾಗೂ ಸಾಧಕ ಯುವ ಮಿತ್ರರನ್ನು ಸನ್ಮಾನಿಸಲಾಗುವುದು.
ಹಿಂದಿನ ದಿನ ಬರುವವರಿಗೆ ಆಶ್ರಮದ ವಿದ್ಯಾರ್ಥಿ ನಿಲಯದಲ್ಲಿ ವಸತಿ ವ್ಯವಸ್ಥೆ ಇರಲಿದೆ. ಅರ್ಹರ ಹೆಸರುಗಳನ್ನು ಶಿಫಾರಸು ಮಾಡಲು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಟೀಂ ವಿಕಾಸ ಕೋರಿದೆ.

