ಬೆಳ್ತಂಗಡಿ : ಟೈಲರ್ಸ್ ಅಸೋಸಿಯೇಷನ್‌ನಿಂದ ಡೆಂಟಲ್ ಕ್ಲಿನಿಕ್, ವೀಲ್‌ಚೇರ್ ವಿತರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

0
33

ಬೆಳ್ತಂಗಡಿ : ಕರ್ನಾಟಕ ಟೈಲರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯ, ಕ್ಷೇತ್ರ ಸಮಿತಿ ಹಾಗೂ ಎಜೆ ಡೆಂಟಲ್ ಹಾಸ್ಪಿಟಲ್ ಮಂಗಳೂರು ಇವರ ಸಹಭಾಗಿತ್ವದಲ್ಲಿ ಡೆಂಟಲ್ ಫಿಲ್ಲಿಂಗ್, ಡೆಂಟಲ್ ಕ್ಲಿನಿಕ್, ವೀಲ್‌ಚೇರ್ ವಿತರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಧರ್ಮಸ್ಥಳದ ಕಲಾಭವನದಲ್ಲಿ ನಡೆಯಿತು.

ಕಾರ್ಯಕ್ರಮವು ಸುರೇಂದ್ರ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಉದ್ಘಾಟನೆಯನ್ನು ಸಂಪತ್ ಸುವರ್ಣ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಶೈಲೇಶ್ ಆರ್.ಜೆ., ಟೈಲರ್ಸ್ ಬ್ಯಾಂಕ್ ನಿರ್ದೇಶಕರಾದ ವಸಂತ ಪೂಜಾರಿ, ಗೋಲ್ಡನ್ ಮೆಕವರ್ ಬ್ಯೂಟಿ ಪಾರ್ಲರ್‌ನ ಜಯಮಾಲ ಯೋಗೀಶ್, ಉಜಿರೆ ವಲಯದ ಅಧ್ಯಕ್ಷೆ ಝೀನತ್ ಉಜಿರೆ, ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಲ್ಯಾನ್ಸಿ ಡಿಸೋಜಾ ಹಾಗೂ ಯುವ ಉದ್ಯಮಿ ಟು ವಿತ್ ಕೆ. ಸಾಲಿಯನ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಮಾಜಮುಖಿ ಸೇವೆಯ ಅಂಗವಾಗಿ ವೀಲ್‌ಚೇರ್ ವಿತರಣೆ ಹಾಗೂ ವಿದ್ಯಾರ್ಥಿಗಳ ಪ್ರತಿಭೆಗೆ ಗೌರವ ಸಲ್ಲಿಸುವ ಮೂಲಕ ಸನ್ಮಾನ ಕಾರ್ಯಕ್ರಮ ವಿಶೇಷ ಗಮನ ಸೆಳೆಯಿತು.

LEAVE A REPLY

Please enter your comment!
Please enter your name here