ಹೆಬ್ರಿ : 2025-26 ನೆ ಸಾಲಿನ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಮರುಮೌಲ್ಯಮಾಪನದ ನಂತರ ಗಣಿತ ವಿಷಯದಲ್ಲಿ 7 ಅಂಕಗಳನ್ನು ಹೆಚ್ಚುಪಡೆದು ಒಟ್ಟು 611 ಅಂಕಗಳನ್ನು ಗಳಿಸಿ 97.76 % ಫಲಿತಾಂಶದೊಂದಿಗೆ ಪ್ರತೀಕ್ಷಾ ಕುಲಾಲ್ ಹೆಬ್ರಿ ತಾಲೂಕಿಗೆ ದ್ವಿತೀಯ ಸ್ಥಾನ ಹಾಗೂ ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ.
ಅಲ್ಲದೆ ಕಾರ್ಕಳ ಶಿಕ್ಷಣ ವಲಯದಲ್ಲಿ ಕನ್ನಡ ಮಾಧ್ಯಮದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾಳೆ. ಮುದ್ರಾಡಿ ವಿದ್ಯಾಸಾಗರ ಎಜುಕೇಶನ್ ಟ್ರಸ್ಟ್ (ರಿ.) ವತಿಯಿಂದ ನಡೆಸಲ್ಪಡುವ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿನಿಯಾಗಿರುವ ಈಕೆಯು ಬಡ ಕೂಲಿ ಕಾರ್ಮಿಕರಾದ ಬಲ್ಲಾಡಿ ಎಲ್ಸ್ ಬೆಟ್ಟು ಜಯ ಕುಲಾಲ್ ಮತ್ತು ಸುಧಾ ಕುಲಾಲ್ ದಂಪತಿಗಳ ಪುತ್ರಿಯಾಗಿರುತ್ತಾಳೆ.ಈಕೆಯ ಗಮನಾರ್ಹ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು ಮತ್ತು ಶಿಕ್ಷಕ ವೃಂದ, ರಕ್ಷಕ ಶಿಕ್ಷಕ ಸಮಿತಿ, ಹಳೆ ವಿದ್ಯಾರ್ಥಿ ಸಂಘ, ಪೋಷಕರು, ವಿದ್ಯಾರ್ಥಿ ವೃಂದ, ಹಳೆ ವಿದ್ಯಾರ್ಥಿ ವೃಂದ, ಮುದ್ರಾಡಿಯ ಸಮಸ್ತ ಗ್ರಾಮಸ್ಥರು ಅಪಾರ ಹರ್ಷ ವ್ಯಕ್ತಪಡಿಸಿರುತ್ತಾರೆ.

