ಪಣಿಯಾಡಿ ಭಾಗವತ ಸಪ್ತಾಹ ಪ್ರವಚನಕ್ಕೆ ಚಾಲನೆ

0
7

ಪಣಿಯಾಡಿ ಶ್ರೀ ಅನಂತಾನಂತ ಶ್ರೀ ಲಕ್ಷ್ಮೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಅಧಿಕ ಮಾಸ ಪ್ರಯುಕ್ತ ನಡೆಯಲಿರುವ ಭಾಗವತ ಸಪ್ತಾಹ ಪ್ರವಚನಕ್ಕೆ ದೇವಾಲಯದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಕೆ. ರಾಘವೇಂದ್ರ ಭಟ್ ಹಾಗೂ ಪ್ರವಚನಕಾರ ವಿದ್ವಾನ್ ಹರಿಪ್ರಸಾದ್ ಭಟ್ ಹೆರ್ಗ ದೀಪ ಬೆಳಗಿಸಿ ಚಾಲನೆ ನೀಡಿದರು.

ಶ್ರೀ ಪುತ್ತಿಗೆ ಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯ, ಸೇವಾಕರ್ತರಾದ ಶ್ರೀ ರಾಮಚಂದ್ರ ಅನಸೂಯ ಆಚಾರ್ಯ ದಂಪತಿಗಳವರು, ಕೃಷ್ಣ ಮೂರ್ತಿ ಆಚಾರ್ಯ,ಅನಂತ ವಿಪ್ರ ಬಳಗದ ಶ್ರೀ ರಘುಪತಿ ಸವಿತಾ ಭಟ್ ದಂಪತಿಗಳವರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಸುಮಾರು 90 ನಿಮಿಷಗಳ ಜ್ಞಾನ ಸಂಪತ್ತಿನ ಪ್ರವಚನ ಕಾರ್ಯಕ್ರಮ ನಡೆಯಿತು. ಪಣಿಯಾಡಿ ಕೆ.ರಾಘವೇಂದ್ರ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here