ಫೀನಿಕ್ನಲ್ಲಿ ಶ್ರೀ ಬನ್ನಂಜೆ ಸಂಸ್ಮರಣಾ ದಿನ ಮೇಯರ್ ರವರಿಂದ ಅಧಿಕೃತ ಘೋಷಣೆ

0
10

ಅಮೆರಿಕಾದ ಶ್ರೀ ಪುತ್ತಿಗೆ ಮಠದ ಮೊದಲ ಶಾಖೆಯಾದ ಫಿನಿಕ್ಸ್ ಮಹಾನಗರದ ಶ್ರೀವೆಂಕಟ ಕೃಷ್ಣ ವೃಂದಾವನ ಕ್ಷೇತ್ರದಲ್ಲಿ ಇಂದು ನಡೆದ “ಶ್ರೀ ಬನ್ನಂಜೆ 90 ವಿಶ್ವನಮನ” ಕಾರ್ಯಕ್ರಮದಲ್ಲಿ ಫೀನಿಕ್ಸ್ ನಗರದ ಪ್ರಸಕ್ತ ಮೇಯರ್ ಶ್ರೀ ಕೋರಿ ವುಡ್ಸ್ (Corey Woods) ರವರು ವಿದ್ಯಾ ವಾಚಸ್ಪತಿ ಶ್ರೀ ಬನ್ನಂಜೆಗೋವಿಂದಾಚಾರ್ಯರು ವಿಶ್ವಕ್ಕೆ ನೀಡಿದ ಅಪಾರ ಅಧ್ಯಾತ್ಮ ಮಾರ್ಗದರ್ಶನವನ್ನು ಗಮನಿಸಿ ಇಂದಿನ ವಿಶ್ವ ನಮನ ದಿನವನ್ನು ಫಿನಿಕ್ಸ್ ನಗರದಲ್ಲಿ ಶ್ರೀ ಬನ್ನಂಜೆ ಸಂಸ್ಮರಣ ದಿನವನ್ನಾಗಿ ಆಚರಿಸುವುದಾಗಿ ಘೋಷಿಸಿದರು.

ಈ ಬಗ್ಗೆ ನೀಡಿದ ಅಧಿಕೃತ ಪತ್ರವನ್ನುಶ್ರೀ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಶ್ರೀಪ್ರಸನ್ನಾಚಾರ್ಯ ಮತ್ತು ಪ್ರಧಾನ ಅರ್ಚಕರಾದ ಶ್ರೀ ಕಿರಣ್ ರಾವ್ ರವರು ಶ್ರೀ ಬನ್ನಂಜೆ ಪ್ರತಿಷ್ಠಾನದ ಡಾ ವೀಣಾ ಬನ್ನಂಜೆ ಮತ್ತು ಡಾ ಗುರುರಾಜ್ ಕರ್ಜಿಗಿ ಯವರಿಗೆ ನೆರೆದ ಸಭೆಯಲ್ಲಿ ಹಸ್ತಾಂತರಿಸಿದರು.

ಸಭೆಯಲ್ಲಿ ಡಾ ಪೂರ್ಣ ಪ್ರಸಾದ್ ಮತ್ತು ವಿದ್ವಾಂಸರಾದ ಶ್ರೀ ಕೇಶವ ತಾಡಿಪತ್ರಿಯವರು ಜೊತೆಗಿದ್ದಾರೆ. ಪರಮ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಅನುಗ್ರಹದೊಂದಿಗೆ ಈ ವಿಶ್ವ ನಮನ ಕಾರ್ಯಕ್ರಮವು ಅಮೆರಿಕಾದ ನ್ಯೂಜೆರ್ಸಿ , ಹೂಸ್ಟನ್, ಫಿನಿಕ್ಸ್ ನಲ್ಲಿ ನಡೆದಿದಿದ್ದು ಮುಂದೆ ಸಾನೋಜೆ ನಗರದ ಮಠದಲ್ಲಿ 23ರಂದು ನಡೆಯಲಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here