ಟ್ರಾನ್ಸ್ ಜೆಂಡರ್ ವ್ಯಕ್ತಿಗಳ ಹಕ್ಕುಗಳ ರಕ್ಷಣೆ ಅಗತ್ಯ

0
4

ದ.ಕ ಜಿಲ್ಲಾ ನವಸಹಜ ಸಮುದಾಯ ಸಂಘಟನೆ, ಪಿ ಎಸ್ ಜಿ ಎಂ ಆರ್ ಕೋಇಲೇಶನ್, ಸಾರಕ್ಷ ಕರ್ನಾಟಕ ರಾಜ್ಯ ಮಟ್ಟದ ಸಮುದಾಯ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಮೇ 23 ರಂದು ಟ್ರಾನ್ಸ್ ಜೆಂಡರ್ ವ್ಯಕ್ತಿಗಳ ಹಕ್ಕುಗಳ ರಕ್ಷಣೆ ಆಗಬೇಕು ಎಂದು 2026ರ ತಿದ್ದುಪಡಿ ಮಸೂದೆಯನ್ನು ಪತ್ರಿಕಾಗೋಷ್ಠಿಯಲ್ಲಿ ಖಂಡಿಸಲಾಯಿತು.

ಈಗಾಗಲೇ ಅಸ್ತಿತ್ವಗಳಿರುವ ಸಮಾನತೆ, ಗೌರವ, ಸ್ವಯಂ ಗುರುಪಿನ ಹಕ್ಕುಗಳನ್ನು ದುರ್ಬಲಗೊಳಿಸಬಾರದು. ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಲಿಂಗ ಗುರುತನ್ನು ಸ್ವತಹ ನಿರ್ಧರಿಸುವ ಹಕ್ಕು ಇದೆ. ವೈದ್ಯಕೀಯ ಅಥವಾ ಆಡಳಿತಾತ್ಮಕ ಅನುಮತಿಯ ಅಗತ್ಯ ಇರುವುದಿಲ್ಲ. ಟ್ರಾನ್ಸ್ ಜೆಂಡರ್ ವ್ಯಕ್ತಿಗಳ ಮೇಲೆ ಮೇಲ್ವಿಚಾರಣೆ ಮತ್ತು ನಿಯಂತ್ರಣವನ್ನು ಹೆಚ್ಚಿಸುವ ಅಪಾಯವನ್ನು ಹೋಗಲಾಡಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಕೇಳಿಕೊಳ್ಳಲಾಯಿತು.

ಎಲ್ಲಾ ಸಮುದಾಯಗಳೊಂದಿಗೆ ಸಮಾಲೋಚನೆ ನಡೆಸಿ ಮಾನವ ಹಕ್ಕು, ಉಲ್ಲಂಘನೆ ಯಾಗದಂತೆ ಗೌರವ ಮತ್ತು ಸಮಾನತೆಯಿಂದ ಎಲ್ಲರನ್ನು ನಡೆಸಿಕೊಳ್ಳಬೇಕೆಂದು ಕೇಂದ್ರ ಸರ್ಕಾರದಲ್ಲಿ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕ್ರಿಸ್ತಿರಾಜ್, ಪುಂಡಲಿಕ, ತ್ರಿಮೂರ್ತಿ, ಉಚ್ಚಂಗಿ ಪ್ರಸಾದ್, ದೀಕ್ಷಾ ಹಾಗೂ ಇತರರು ಹಾಜರಿದ್ದರು.
.

LEAVE A REPLY

Please enter your comment!
Please enter your name here