ರ್ಖಜೂರದ ಬಿಸಿನೆಸ್​ ಹೆಸರಲ್ಲಿ ಅಳಿಯನಿಂದಲೇ ಮಾವನಿಗೆ ವಂಚನೆ..!

0
10

ಉಡುಪಿ : ಕತಾರ್​ನಿಂದ ರ್ಖಜೂರ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಆಮದು ಮಾಡಿ ಭಾರತದಲ್ಲಿ ಮಾರಾಟ ಮಾಡಿದರೆ ಭಾರಿ ಲಾಭ ಗಳಿಸಬಹುದು ಎಂದು ನಂಬಿಸಿ ಸ್ವಂತ ಮಾವನಿಗೇ ಲಕ್ಷಾಂತರ ರೂ. ವಂಚಿಸಿದ ಟನೆ ನಡೆದಿದೆ.

ಬಡಗುಬೆಟ್ಟು ಗ್ರಾಮದ ಇಫ್ರಾನ್​ ಅಜೀಜ್​ (50) ವಂಚನೆಗೊಳಗಾದವರು. ಕತಾರ್​ನಲ್ಲಿರುವ ಅಳಿಯ ಮೊಹಮ್ಮದ್​ ಶರ್ಪದ್ದೀನ್​ ಹಾಗೂ ಆತನ ಪಾಲುದಾರರಾದ ಕೇರಳದ ಮಹಮ್ಮದ್​ ಶಾಹಿದ್​ ಮತ್ತು ತಮಿಳುನಾಡಿನ ಶಮೀಮ್​ ಬಾನು ವಂಚನೆ ಎಸಗಿದ ಆರೋಪಿಗಳು.

ಕತಾರ್​ನಿಂದ ಬಂದಿದ್ದ ಅಳಿಯ ಶರ್ಪದ್ದೀನ್​ ಮಾವ ಇಫ್ರಾನ್​ ಅವರಿಗೆ ತಾನು ರ್ಖಜೂರದ ಬಿಸಿನೆಸ್​ ಆರಂಭಿಸಿದ್ದು ಉತ್ತಮ ಲಾಭ ಬರುತ್ತಿದೆ ಎಂದು ಹೂಡಿಕೆಗೆ ಒತ್ತಾಯಿಸಿದ್ದನು. ಇದನ್ನು ನಂಬಿದ ಇಫ್ರಾನ್​ ಆರೋಪಿಗಳ ಬ್ಯಾಂಕ್​ ಖಾತೆಗೆ ಹಂತ ಹಂತವಾಗಿ ಒಟ್ಟು 15,81,000 ರೂ. ವರ್ಗಾವಣೆ ಮಾಡಿದ್ದರು.

ಹಣ ಪಡೆದ ಬಳಿಕ ಆರೋಪಿಗಳು ಯಾವುದೇ ಸರಕುಗಳನ್ನು ಕಳುಹಿಸದೆ, ಮೊಬೈಲ್​ ಸ್ವಿಚ್​ ಆಫ್​ ಮಾಡಿಕೊಂಡು ವಂಚಿಸಿದ್ದಾರೆ. ಈ ಬಗ್ಗೆ ಇಫ್ರಾನ್​ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಉಡುಪಿ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here