ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮಾನ್ಯ ಅಧ್ಯಕ್ಷರು ಡಾ. ನಾಗಲಕ್ಷ್ಮೀ ಚೌಧರಿ ವಿಜೇತ ವಿಶೇಷ ಶಾಲೆಗೆ ಭೇಟಿ

0
14

ಕಾರ್ಕಳ : ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಡಾ. ನಾಗಲಕ್ಷ್ಮೀ ಚೌಧರಿ ಇವರು ವಿಜೇತ ವಿಶೇಷ ಶಾಲೆಗೆ ಭೇಟಿ ನೀಡಿ ಶಾಲಾ ಅಭಿಮಾನದ ಗೌರವವನ್ನು ಸ್ವೀಕರಿಸಿ, ಶಾಲಾ ಚಟುವಟಿಕೆಗಳನ್ನು ವೀಕ್ಷಿಸಿ, ಕ. ರಾ.ಶಿಕ್ಷಕರ ಸಂಘದ ಮನವಿಯನ್ನು ಸ್ವೀಕರಿಸಿ, ಸಂಸ್ಥೆಯ ಕುರಿತಂತೆ ಪ್ರಶಂಸನೀಯ ಮಾತುಗಳನ್ನಾಡಿ, ಶಿಕ್ಷಕರ ಸಮಸ್ಯೆಗಳಿಗೆ ತನ್ನ ಮಿತಿಯಲ್ಲಿರುವ ವಿಚಾರಗಳ ಬಗ್ಗೆ ಪರಿಶೀಲಿಸಿ, ಶೀಘ್ರವಾಗಿ ಸ್ಪಂದಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಾದ ರತ್ನ , ವಿಜೇತ ವಿಶೇಷ ಶಾಲೆಯ ಗೌರವಾಧ್ಯಕ್ಷರಾದ ಶ್ರೀಯುತ ಉದಯ ಶೆಟ್ಟಿ ಮುನಿಯಾಲು, ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕ ಶಿಕ್ಷಕೇತರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ವಸಂತ್ ಕುಮಾರ್ ಶೆಟ್ಟಿ, ಗೌರವಾಧ್ಯಕ್ಷರಾದ ಆಗ್ನೇಸ್ ಕುಂದರ್, ರಾಜ್ಯ ಕಾರ್ಯಾಧ್ಯಕ್ಷರು ಡಾ. ಕಾಂತಿ ಹರೀಶ್ ಇವರ ಗೌರವ ಉಪಸ್ಥಿತಿಯಲ್ಲಿ ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕ-ಶಿಕ್ಷಕೇತರರ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಸಲ್ಲಿಸಲಾಯಿತು.

ಹರ್ಷಿತಾ ಕಿರಣ್ ನಿರೂಪಿಸಿದ ಕಾರ್ಯಕ್ರಮ ದಲ್ಲಿ ಡಾ. ಕಾಂತಿ ಹರೀಶ್ ಪ್ರಾಸ್ತಾವಿಕ ನುಡಿಗಳನ್ನಾಡಿ ಕುಮಾರಿ ಶಿಲ್ಪ ವಂದಿಸಿದರು.

LEAVE A REPLY

Please enter your comment!
Please enter your name here