ಫೈನಲ್‌ಗೆ ನುಗ್ಗಿದ ಆರ್ ಸಿ ಬಿ.

0
26

ಶತಕ ತಪ್ಪಿದರೂ ಅಭಿಮಾನಿಗಳ ಮನ ಗೆದ್ದ ನಾಯಕ “ರಜತ್ ಪಟೋದಾರ್”

ಗುಜರಾತ್ ಟೈಟನ್ಸ್ ತಂಡದ ವಿರುದ್ಧ 92 ರನ್‌ಗಳ ಬೃಹತ್ ಅಂತರದಿಂದ ಭರ್ಜರಿ ಜಯ ಗಳಿಸಿತು, ನಾಯಕ ರಜತ್ ಪಾಟಿದಾರ್ ಅದ್ಭುತ ಬಿರುಸಿನ ಆಟ ದಿಂದ ಇಂದು ಹಿಮಾಚಲ್ ಪ್ರದೇಶದ ಧರ್ಮಶಾಲ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಕ್ವಾಲಿಫೈಯರ್ 1ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎದುರಾಳಿಗಳ ಮೇಲೆ ಸಂಪೂರ್ಣ ಒತ್ತಡ ಹೇರಿ ಆಡಿದ್ದು ನಿಜಕ್ಕೂ ಆಕರ್ಶಕ ಆಟ, ಬೌಲರ್‌ಗಳು, ಬ್ಯಾಟರ್‌ಗಳು, ಫಿಲ್ಡರ್ ಗಳು ಹೀಗೆ ಇಡಿ ತಂಡ ಒಂದಾಗಿ ಹೋರಾಡಿದ ಈ ಆಟ,
ಆರ್ ಸಿ ಬಿ ಯ ಶಕ್ತಿಯನ್ನು ಇಡೀ ಕ್ರಿಕೆಟ್ ಜಗತ್ತಿಗೆ ತೂರಿಸಿ ಸಾರಿ ಹೇಳಿದಂತೆ ಆಗಿದೆ.

ಮೊದಲು ಬ್ಯಾಟ್ ಮಾಡಿದ RCB , 254 ರನ್‌ಗಳ ದೊಡ್ಡ ಮೊತ್ತ ಸೇರಿಸಿ, ಎದುರಾಳಿ ಬೌಲರ್ ಗಳನ್ನು ಸಂಪೂರ್ಣವಾಗಿ ಕಟ್ಟಿಹಾಕಿತು. ಟಾಸ್ ಗೆದ್ದ ಉಖಿ ಮೊದಲು ಫಿಲ್ಡಿಂಗ್ ಅಯ್ಕೆ ಮಾಡಿಕೊಂಡಿತು, ಆರ್ ಸಿ ಬಿ ಆರಂಭದಿAದಲೇ ಸಿಡಿಲಬ್ಬರದ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ತೂರಿಸಿತು, ನಾಯಕ ರಜತ್ ಪಾಟಿದಾರ್ ಒತ್ತಡದಲ್ಲಿಯೂ ಸಹ ತಂಡವನ್ನು ಮುನ್ನಡೆಸಿ ಕೇವಲ33 ಎಸೆತಗಳಲ್ಲಿ 93 ರನ್ ಚಚ್ಚಿದರು. 9 ಬೌಂಡರಿ, ೫ ಸಿಕ್ಸರ್‌ಗಳಿಂದ ಕೂಡಿದ ಅವರ ಇನ್ನಿಂಗ್ಸ್ ಸ್ಟೇಡಿಯಂನಲ್ಲಿ ರೋಮಾಂಚನ ಸೃಷ್ಟಿಸಿತು. ಇವರ ನಾಯಕತ್ವ ಆರ್.ಸಿ.ಬಿ ಯ ಪಾಲಿಗೆ ಬೆಲೆ ಕಟ್ಟಲಾಗದ್ದು.

ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಜೇಸನ್ ಹೋಲ್ಡರ್, ಪ್ರಸಿದ್ಧ್ ಕೃಷ್ಣ, ರಶೀದ್ ಖಾನ್’ರನ್ನೊಳಗೊಂಡ ಬಲಿಷ್ಠ ಬೌಲಿಂಗ್ ಆಕ್ರಮಣದ ಮುಂದೆ ಅತ್ಮಸ್ಥೆರ್ಯದಿಂದ ಆಕರ್ಶಕವಾಗಿ ಬ್ಯಾಟಿಂಗ್ ಅಡಿ ರನ್ ಮಳೆ ಸುರಿಸಿದ ಆಟವನ್ನು ಎಂದೂ ಯಾರು ಮರೆಯುವಂತಿಲ್ಲ, ಶತಕದಿಂದ ಕೇವಲ ೭ ರನ್‌ಗಳ ಅಂತರದಲ್ಲಿ ಮಂಚಿತರಾದರೂ, ಅವರ ಜವಾಬ್ದಾರಿಯುತ ಆಟವೇ ಆರ್ ಸಿ ಬಿ ಗೆ 254 ರನ್‌ಗಳ ಬಲಿಷ್ಠ ತಳಪಾಯ ಹಾಕಿಕೊಟ್ಟಿತು.

ಆರ್.ಸಿ.ಬಿಯ 18 ವರ್ಷಗಳ ಕಪ್ ಕನಸನ್ನು ನನಸು ಮಾಡಿದ್ದ ನಾಯಕನಿವನು, ಆರ್.ಸಿ.ಬಿಯನ್ನು ಸತತ ೨ನೇ ಬಾರಿ ಫೈನಲ್’ಗೆ ಮುನ್ನಡೆಸಿ ಖಅಃ ಯ ಅದೃಷ್ಟವನ್ನೆ ಬದಲಿಸಿದ ಸಾರಥಿ ರಜತ್ ಪಟಿದಾರ್, ಇವರ ಜೊತೆ ಪ್ರತಿ ಬ್ಯಾಟರ್‌ಗಳು ಸಹ ಸ್ಫೋಟಕ ಹಾಗು ಜವಾಬ್ದಾರಿಯುತ ಆಟವಾಡಿ ಉಖಿ ಬೌಲರ್‌ಗಳನ್ನು ತಬ್ಬಿಬ್ಬು ಗೊಳಿಸಿದರು.

255 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಉಖಿ ತಂಡವನ್ನು ಖಅಃ ಬೌಲರ್‌ಗಳು 162ರನ್‌ಗಳಿಗೆ ಕಟ್ಟಿಹಾಕಿದರು. ಪವರ್‌ಪ್ಲೇನಲ್ಲೇ ೩ ವಿಕೆಟ್ ಕಿತ್ತು ಎದುರಾಳಿಗಳ ಮನಸ್ಥೆರ್ಯ ಕುಗ್ಗಿಸಿದರು. ಮಧ್ಯಮ ಓವರ್‌ಗಳಲ್ಲಿ ರನ್‌ಗೆ ಕಡಿವಾಣ ಹಾಕಿ ಒತ್ತಡ ಹೆಚ್ಚಿಸಿದರು. ಕೊನೆಗೆ RCB 92 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿತು.

RCB ನಾಯಕ ರಜೆತ್ ಪಾಟಿದಾರ್ ಆಟಕ್ಕೆ ಎಲ್ಲೆಡೆ ಮೆಚ್ಚುಗೆ ಹರಿದು ಬಂದಿದೆ, ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ರಜತ್ ಪಾಟಿದಾರ್ ಕುರಿತು ಮಾಜಿ ಕ್ರಿಕೆಟಿಗರು ಮುಕ್ತಕಂಠದಿAದ ಹೊಗಳಿದ್ದಾರೆ. “ಒತ್ತಡದ ಕ್ವಾಲಿಫೈಯರ್ 1 ನಲ್ಲಿ ನಾಯಕನಾಗಿ ತಂಡವನ್ನು ಮುಂದೆ ನಿಂತು ಹೋರಾಡಿ ಮುನ್ನಡೆಸಿದ ರೀತಿ ಅದ್ಭುತ. ಇದು ನಾಯಕತ್ವದ ಇನ್ನಿಂಗ್ಸ್” ಎಂದು ವಿಶ್ಲೇಷಕರು ಬಣ್ಣಿಸಿದ್ದಾರೆ. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ‘ಕ್ಯಾಪ್ಟನ್ ರಜತ್’ ನ ಹ್ಯಾಶ್‌ಟ್ಯಾಗ್ ಟ್ರೆಂಡ್ ಮಾಡಿದ್ದಾರೆ.

‘ಈ ಸಲ ಕಪ್ ನಮ್ದೇ’ ಎಂಬ ಕೂಗು ನ್ನು ಮತ್ತಷ್ಟು ಗಟ್ಟಿ ಗೊಳಿಸಿದ್ದಾರೆ. ಈ ಗೆಲುವಿನೊಂದಿಗೆ ಖಅಃ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಕಪ್ ಗೆಲ್ಲುವ ಕನಸಿಗೆ ಇನ್ನೊಂದೇ ಹೆಜ್ಜೆ ಬಾಕಿ ಉಳಿದಿದೆ. ಫೈನಲ್‌ನಲ್ಲೂ ಇದೇ ಛಲ, ಇದೇ ಆಕ್ರಮಣಕಾರಿ ಆಟ ಇದೇ ಜೋಶ್, ಇದೇ ಹೋರಾಟ ಮುಂದುವರಿದರೆ ‘ಈ ಸಲ ಕಪ್ ನಮ್ದೇ’ ಅನ್ನುವ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಕನಸು ನನಸಾಗುವುದರಲ್ಲಿ ಸಂಶಯವಿಲ್ಲ.

ಹೆಚ್ .ವಿ.ಮಂಜುನಾಥ ಸ್ವಾಮಿ


LEAVE A REPLY

Please enter your comment!
Please enter your name here