ಬಂಟ್ವಾಳ ತಾಲೂಕು ಗಮಕ ಪರಿಷತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0
25

ಬಂಟ್ವಾಳ ತಾಲೂಕು ಗಮಕ ಪರಿಷತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನ ಪಾಣೆಮಂಗಳೂರುಕರ್ನಾಟಕ ಗಮಕಲಾಪರಿಷತ್ ರೀ ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ಗಮಕಲಾ ಪರಿಷತ್ತು ಆಶ್ರಯದಲ್ಲಿ ಕರ್ನಾಟಕಗಮಕಕಲಾ ಪರಿಷತ್ತು ಬಂಟ್ವಾಳ ತಾಲೂಕು ಘಟಕ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಂಟ್ವಾಳ ತಾಲೂಕು ಘಟಕ ಅಧ್ಯಕ್ಷ ಕೆಯ್ಯೋರು ನಾರಾಯಣ ಭಟ್ ಅಧ್ಯಕ್ಷತೆಯಲ್ಲಿ ಜರಗಿತು ನಿವೃತ್ತ ಪ್ರಾಧ್ಯಾಪಕ ಎಚ್ಎನ್ ಹೆಬ್ಬಾರ ದೀಪ ಬೆಳಗಿ ಗಮಕ ವಾಚಿಸಿಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರವನ್ನು ಜಿಲ್ಲಾ ಘಟಕ ಅಧ್ಯಕ್ಷ ಪ್ರೊಫೆಸರ್ ಮದ್ದೂರು ಮೋಹನ ಕಲ್ಲೂರಾಯ ನೆರವೇರಿಸಿದರು ದೇವಸ್ಥಾನದ ವ್ಯವಸ್ಥಾಪನಸಮಿತಿ ಅಧ್ಯಕ್ಷ ಬಿ ರಘುನಾಥ ಸೋಮ ಯಾಜಿ ಶುಭ ಹಾರೈಸಿದರು ಸಜೀಪ ಮಾಗಣೆ ತಂತ್ರಿ ಭಾರತೀಯ 64 ಕಲೆಗಳಲ್ಲಿ ಒಂದಾದ ಗಮಕಲೆ ಕಾರ್ಯಕ್ರಮ ಮನೆಮನೆಗಳಲ್ಲಿ ನಡೆಯುವಂತಾಗಲಿ ಎಂಬುದಾಗಿ ಶುಭ ಹಾರೈಸಿದರು .

ಕಾಲೇಜು ಪ್ರಾಚಾರ್ಯ ಡಾ/ ಗಿರೀಶ್ ಭಟ್ ಅಜೆಕಳ ಹಿಂದೆ ರಾಜಾಶ್ರಯದಿಂದ ಗೌರವಿಸಲ್ಪಡುತ್ತಿದ್ದ ಗಮಕಲೆ ಇಂದು ಜನಾಶ್ರಯದಿಂದ ಮುಂದಿನ ಜನಪದಕ್ಕೆ ಪ್ರಸಾರವಾಗುವಲ್ಲಿ ಇಂಥ ಕಾರ್ಯಕ್ರಮಗಳು ಉಪಯುಕ್ತವಾಗಲಿದೆ ಎಂದರು ನೂತನ ಕಾರ್ಯದರ್ಶಿ ನ್ಯಾಯವಾದಿ ರವೀಂದ್ರ ಕುಕ್ಕಾಜೆ ಕಾರ್ಯಕ್ರಮಗಳ ವಿವರ ನೀಡಿದರು .

ನೂತನ ಅಧ್ಯಕ್ಷ ಎ ರವಿಶಂಕರ ಮೈಯ್ಯ ಗಮಕಲೆ ಬಂಟ್ವಾಳದ ಮೂಲೆ ಮೂಲೆಯಲ್ಲೂ ಕಾರ್ಯಕ್ರಮ ನಡೆಸಲು ಎಲ್ಲರೂ ಸಹಕರಿಸುವಂತೆ ವಿನಂತಿಸಿದರು ನಮೋ ಕುಮಾರವ್ಯಾಸ ಗಮಕಗೀತೆ ಹಾಗೂ ಕನಕದಾಸ ವಿರಚಿತ ದಾಸ ಸಾಹಿತ್ಯಗಮಕ ವಾಚನ ಹಿರಿಯ ಕಿರಿಯ ಗಮಕಿಗಳಿಂದ ನಡೆಸಲಾಯಿತು ಭೀಮಾಂಜನೇಯ ಸಮಾಗಮ ಸೌಗಂಧಿಕಾ ಸಂದಿ ಎಂಬ ಭಾಗವನ್ನು ಮಂಜುಳಾ ಸುಬ್ರಮಣ್ಯ ಭಟ್ ಗಮಕಿಯಾಗಿ ಪ್ರೊಫೆಸರ್ ಮದ್ದೂರು ಮೋಹನ ಕಲ್ಲೂರಾಯ ವ್ಯಾಖ್ಯಾನಕಾರರಾಗಿ ಉತ್ತಮವಾಗಿ ಕಥಾನಕವನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here