ಉಡುಪಿ ACCEA ವತಿಯಿಂದ ; ಎಂಜಿನಿಯರ್ಸ್ ಮೀಟ್

0
10

ಉಡುಪಿ : ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರಿಂಗ್ ಆ್ಯಂಡ್ ಆರ್ಕಿಟೆಕ್ಟ್ಸ್‌(ಎಸಿಸಿಇಎ) ಉಡುಪಿ  ಕೆ ಕೆ  ಲೀವಿಂಗ್ ಉದ್ಯಾವರ   ಈ  ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಕಡಿಯಾಳಿ ಓಶಿಯನ್ ಪರ್ಲ್ ಹೊಟೇಲ್‌ನ ಸಭಾಂಗಣದಲ್ಲಿ ಎಂಜಿನಿಯರ್ಸ್ ಮೀಟ್ ಗುರುವಾರ  ನಡೆಯಿತು. 

ಇಂಜಿನಿಯರ್ಸ್ ಮೀಟ್ ನ್ನು  ಉಡುಪಿಯ ಪ್ರಸಿದ್ಧ  ಮಾರುತಿ ಫರ್ನಿಚರ್  ಇದರ ನೂತನ  ಅಂಗ ಸಂಸ್ಥೆಯಾದ  K K ಲೀವಿಂಗ್  ಮ್ಯಾನೇಜಿಂಗ್ ಡೈರೆಕ್ಟರ್ ಆದ ಶ್ರೀಯುತ ಕಾರ್ತಿಕ್ ಕೋಟ್ಯಾನ್ ದೀಪ ಬೆಳಗಿಸಿ ಚಾಲನೆ ನೀಡಿ ಶುಭ ಹಾರೈಸಿದರು ,ಅವರನ್ನು ಸಂಸ್ಥೆಯವತಿಯಿಂದ ಗೌರವಿಸಲಾಯಿತು.

ಮಾಜಿ  ಅಧ್ಯಕ್ಷ ಯೋಗೀಶ್ಚಂದ್ರಧರ ಪ್ರಸ್ತಾಾವನೆಗೈದು  ಉಡುಪಿ ಪ್ರಸಿದ್ಧಿ ಜೊತೆಗೆ  ವೇಗದ ಪ್ರಗತಿ ಹೊಂದಲು ಎಂಜಿನಿಯರ್ಸï ಗಳ ಕೊಡುಗೆ ಅಪಾರ  , ರಸ್ತೆ, ಕಟ್ಟಡಗಳಿಗೆ ನೀಲಿ  ನಕಾಶೆಯೊಂದಿಗೆ ನಿರ್ಮಾಣ ಕ್ಷೇತ್ರಕ್ಕೆ ಕೊಡುಗೆ ಶ್ಲಾಘನೀಯ.  ಅಭಿವೃದ್ಧಿ ಕಾರ್ಯಕ್ಕೆ ಸರಕಾರದ  ಇಲಾಖೆಯಿಂದ  ಸಹಕಾರ ಸಿಗುತ್ತಿಲ್ಲ  , ಈ ನಿಟ್ಟಿನಲ್ಲಿ  ಸಮಸ್ಯೆಗಳು ಎದುರುರಾದಾಗ  ಸಂಸ್ಥೆಯ ಎಲ್ಲಾ ಸದಸ್ಯರು ಐಕ್ಯಮಾತ್ಯೆಯಿಂದ ಹೋರಾಟಕ್ಕೆ  ಕೈ ಜೋಡಿಸುವಂತೆ  ಕರೆನೀಡಿದರು.

                                                                                                                                                                                                                                    ಮುಖ್ಯ ಅತಿಥಿಯಾದ ಕ್ರೆಡೈ ಅಧ್ಯಕ್ಷ ಸುಧೀರ್ ಶೆಟ್ಟಿ ಅವರು, ಕಠಿನ, ಪರಿಶ್ರಮ, ಸರಳತೆ ಯಶಸ್ಸನ್ನು ಗಳಿಸುವುಕ್ಕೆ ಪೂರಕವಾಗಲಿದೆ. ನಿರಂತರ ಅಭಿವೃದ್ದಿ ಹೊಂದುತ್ತಿರುವ ಉಡುಪಿ ನಗರಕ್ಕೆ ಎಂಜಿನಿಯರ್ ಕೊಡುಗೆ ಬಹಳಷ್ಠಿದೆ ಎಂದರು . 

ಇನೋರ್ವ  ಮುಖ್ಯ ಅತಿಥಿಯಾದ  ಉಡುಪಿ  ಬಿಲ್ಡರ್ಸ್ ಅಸೋಸಿಯೇಷನ್  ನೂತನ ಅಧ್ಯಕ್ಷ ವಿ ಪ್ರಸಾದ ಶೆಟ್ಟಿ , ಬಿ ಎನ್ ಐ ವಜ್ರ ಅಧ್ಯಕ್ಷ ಮಿಥುನ್ ಜಯರಾಮ್ ಕದ್ರಿ   ,ಗೌರವಾಧ್ಯಕ್ಷ ನಾಗೇಶ್ ಹೆಗ್ಡೆ  ಉಪಸ್ಥರಿದ್ದರು ,  ಮಾರುತಿ ಫರ್ನಿಚರ್ ಇಂಟೀರಿಯರ್ಸ್  ಸಹ ಸಂಸ್ಥೆಯಾದ   ಕೆ ಕೆ ಲಿವಿಂಗ್  ಇದರ ವಿನ್ಯಾಸಕರಾದ  ಶಿಶಿರ್ ಜಿ  ಕಟ್ಟಡದ ಒಳ ಹಾಗೂ  ಹೊರ ವಿನ್ಯಾಸ  ಉತ್ತಮವಾದ ಆಧುನಿಕ ಶೈಲಿಯಾ ಪೀಠೋಪಕರಣ ತಯಾರಿ ಬಗ್ಗೆ ಕಾರ್ಯಾಗಾರ ಮಾಹಿತಿ ನೀಡಿ ಸಹಕರಿಸಿದರು. 

ಎಸಿಸಿಇಎ ಎಂ. ಗೋಪಾಲ್ ಭಟ್,  ಪಾಂಡುರಂಗ ಆಚಾರ್ ಅತಿಥಿಗಳನ್ನು ಪರಿಚಯಿಸಿದರು , ಸಂಸ್ಥೆಯ ಅಧ್ಯಕ್ಷರಾದ ಭಗವಾನ್ ದಾಸ್ ಕೆ  ಸ್ವಾಗತಿಸಿದರು  .ಕಾರ್ಯದಶೀ ಮಹೇಶ್ ಕಾಮತ್ ವಾರ್ಷಿಕ ವರದಿ ಮಂಡಿಸಿ  ವಂದಿಸಿದರು. ಅಜೇಯ ಶೆಟ್ಟಿ  ನಿರೂಪಿಸಿದರು. ಸಂಸ್ಥೆಯ ಸದಸ್ಯರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನೆಡೆಯಿತು                    

LEAVE A REPLY

Please enter your comment!
Please enter your name here