ಹಳೆಯಂಗಡಿ : ಶ್ರೀ ನಾಲ್ಕೂರು ಪಂಜುರ್ಲಿ ದೈವಸ್ಥಾನದ ಪ್ರಧಾನ ಗುಡಿಯ ನವೀಕರಣ ಕಾರ್ಯದ ಹಿನ್ನೆಲೆಯಲ್ಲಿ, ದೈವಜ್ಞರಿಂದ ಬಂದಿರುವ ಸಲಹೆಯಂತೆ ಹಾಗೂ ಆಡಳಿತ ಮಂಡಳಿಯ ಅನುಮೋದನೆಯೊಂದಿಗೆ ಮಹಾಮೃತ್ಯುಂಜಯ ಶಾಂತಿಹೋಮವು ಮೇ 24 ರಂದು ಜರಗಿತು.

ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಮಾಜದ ಹಿತ ಮತ್ತು ಕ್ಷೇಮಕ್ಕಾಗಿ ಹಮ್ಮಿಕೊಳ್ಳಲಾದ ಈ ಶಾಂತಿಹೋಮಕ್ಕೆ ಸಂಬಂಧಿಸಿದಂತೆ ಸಮಿತಿ ಸದಸ್ಯರು ಹಾಗೂ ಪದಾಧಿಕಾರಿಗಳು ಒಂದು ವಾರದ ವ್ರತಾಚರಣೆ ಕೈಗೊಂಡ್ಡಿದ್ದರು.

