ಶ್ರೀ ಗುರು ರಾಘವೇಂದ್ರ ಸ್ವಾಮಿ ಮಂದಿರದಲ್ಲಿ ಪ್ರಥಮ ವರ್ಷದ ಭಜಕರ ಸಂಭ್ರಮ : ಕು. ಅಕ್ಷಿತ ಸುವರ್ಣ ಅವರಿಗೆ ಸನ್ಮಾನ

0
19

ಶ್ರೀ ಗುರು ರಾಘವೇಂದ್ರ ಸ್ವಾಮಿ ಮಂದಿರ ಪುತ್ತಿಗೆ ವಾರ್ಷಿಕ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಪ್ರಥಮ ವರ್ಷದ ಭಜಕರ ಸಂಭ್ರಮ ಇದರ ವತಿಯಿಂದ ಕು. ಅಕ್ಷಿತ ಸುವರ್ಣ ಇವರಿಗೆ ಸನ್ಮಾನ.

ಮೂಡಬಿದಿರೆ : ಕುಮಾರ ಸುವರ್ಣ ಹಾಗೂ ಬೇಬಿ ಇವರ ಪುತ್ರಿ ಅಪಾರ ಆಸಕ್ತಿ, ಶ್ರದ್ಧೆ ಹಾಗೂ ಸೇವಾಭಾವದಿಂದ ನಿರಂತರವಾಗಿ ತೊಡಗಿಸಿಕೊಂಡು, ವಿವಿಧ ವೇದಿಕೆಗಳಲ್ಲಿ ತಮ್ಮ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇವರು 50 ಕ್ಕೂ ಹೆಚ್ಚು ಭಜನಾ ಕಾರ್ಯಕ್ರಮಗಳು ಹಾಗೂ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಾಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿಯೂ ಅನೇಕ ಪ್ರಶಸ್ತಿಗಳನ್ನು ಪಡೆದು ವಿತಿಷ್ಟ ಸಾಧನೆ ಮಾಡಿದ್ದಾರೆ.

ವಿಶೇಷವಾಗಿ ಮಹಾಲಿಂಗೇಶ್ವರ ಭಜನಾ ತಂಡ, ದೈಲಬೆಟ್ಟು ಕಲ್ಲಮುಂಡೂರು ಇದರೊಂದಿಗೆ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗಳಿಸಿ ಭಜನಾ ಕ್ಷೇತ್ರಕ್ಕೆ ಕೀರ್ತಿ ತಂದಿದ್ದಾರೆ ಭಜನೆಯ ಜೊತೆಗೆ ವಿದ್ಯಾಭ್ಯಾಸದಲ್ಲಿಯೂ ಉತ್ತಮ ಸಾಧನೆ ಮಾಡಿ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ಕೃಷ್ಟ ಅಂಕಗಳನ್ನು ಪಡೆದು ಎಲ್ಲರಿಗೂ ಮಾದರಿಯಾಗಿದ್ದಾರೆ.

ಇವರ ಭಕ್ತಿ, ಸೇವಾಭಾವ, ಸಾಧನೆ ಹಾಗೂ ಪ್ರತಿಭೆ ಇನ್ನಷ್ಟು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸುತ್ತೇವೆ ಭಗವಂತನ ಹಾಗೂ ಗುರುಗಳ ಆಶೀರ್ವಾದ ಸದಾ ಇವರ ಮೇಲಿದ್ದು, ಜೀವನದಲ್ಲಿ ಇನ್ನಷ್ಟು ಯಶಸ್ಸು ಹಾಗೂ ಕೀರ್ತಿ ದೊರಕಲಿ ಎಂದು ಶ್ರೀ ಗುರು ರಾಘವೇಂದ್ರ ಸ್ವಾಮಿ ಮಂದಿರದ ಆಡಳಿತ ವರ್ಗ ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here