BBK13ಗೆ ಕೌಂಟ್‌ಡೌನ್ ಶುರು: ಈ ಬಾರಿಯ ಥೀಮ್ ಏನು?

0
38

ಬೆಂಗಳೂರು: ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಆಗಿರುವ Bigg Boss Kannada ತನ್ನ 13ನೇ ಸೀಸನ್ ಮೂಲಕ ಮತ್ತೊಮ್ಮೆ ಕನ್ನಡಿಗರ ಮನೆಮಾತಾಗಲು ಸಜ್ಜಾಗಿದೆ. 12ನೇ ಸೀಸನ್ ಮುಗಿದು ಇನ್ನೂ ಆರೂ ತಿಂಗಳು ಕಳೆದಿಲ್ಲದಿದ್ದರೂ, ಕಲರ್ಸ್ ಕನ್ನಡ ಹೊಸ ಸೀಸನ್‌ಗಾಗಿ ಸಿದ್ಧತೆ ಆರಂಭಿಸಿದ್ದು, ಮೊದಲ ಪ್ರೋಮೋ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಕಲರ್ಸ್ ಕನ್ನಡ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ “ಈ ವರ್ಷ ಬೇಗ ಶುರುವಾಗ್ತಿದೆ ಕನ್ನಡಿಗರ ಹಬ್ಬ” ಎಂಬ ಅಡಿಬರಹ ನೀಡಿದ್ದು, ಈ ಬಾರಿ ಬಿಗ್ ಬಾಸ್ ಸಾಮಾನ್ಯವಾಗಿ ನಡೆಯುವ ಸೆಪ್ಟೆಂಬರ್-ಅಕ್ಟೋಬರ್‌ಗೂ ಮುನ್ನ ಆರಂಭವಾಗಲಿದೆ ಎಂಬ ಸುಳಿವು ನೀಡಿದೆ.

ಗೋಲ್ಡನ್ ಥೀಮ್ ಸಸ್ಪೆನ್ಸ್

ಪ್ರೋಮೋದಲ್ಲಿ ಚಿನ್ನದ ಬಣ್ಣದ ಥೀಮ್ ಹಾಗೂ ವಿಶೇಷ ವಿನ್ಯಾಸದ ಲೋಗೋ ಗಮನ ಸೆಳೆದಿದೆ. ಇದರಿಂದ ಈ ಬಾರಿಯ ಸೀಸನ್‌ಗೆ ‘ಗೋಲ್ಡನ್ ಥೀಮ್’ ಇರಬಹುದೇ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ.

ಕಾಮನ್ ಮ್ಯಾನ್ Vs ಸೆಲೆಬ್ರಿಟೀಸ್?

ಬಿಗ್ ಬಾಸ್ 13ರ ಥೀಮ್ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿದ್ದು, ಕೆಲವು ಸೋಶಿಯಲ್ ಮೀಡಿಯಾ ಪೇಜ್‌ಗಳ ಪ್ರಕಾರ ಈ ಬಾರಿ ಕಾಮನ್ ಮ್ಯಾನ್ ಮತ್ತು ಸೆಲೆಬ್ರಿಟೀಸ್ ನಡುವಿನ ಸ್ಪರ್ಧೆ ಇರಬಹುದು ಎನ್ನಲಾಗುತ್ತಿದೆ. ಒಂದು ವೇಳೆ ಇದೇ ಥೀಮ್ ಆಗಿದ್ದರೆ, ಮನೆಯಲ್ಲಿ ಮನರಂಜನೆ ಮತ್ತು ಪೈಪೋಟಿ ಮತ್ತಷ್ಟು ರೋಚಕವಾಗಲಿದೆ.

ಮತ್ತೆ ಕಿಚ್ಚನೇ ಸಾರಥಿ

Kichcha Sudeep ಅವರಿಲ್ಲದೆ ಬಿಗ್ ಬಾಸ್ ಕನ್ನಡವನ್ನು ಊಹಿಸುವುದೇ ಕಷ್ಟ. 13ನೇ ಸೀಸನ್‌ನಲ್ಲೂ ಕಿಚ್ಚ ಸುದೀಪ್ ಅವರೇ ನಿರೂಪಕರಾಗಲಿದ್ದು, ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.

ಯಾವಾಗ ಆರಂಭ?

ಸಾಮಾನ್ಯವಾಗಿ ಸೆಪ್ಟೆಂಬರ್ ಕೊನೆಯಲ್ಲಿ ಆರಂಭವಾಗುವ ಬಿಗ್ ಬಾಸ್ ಕನ್ನಡ ಈ ಬಾರಿ ಆಗಸ್ಟ್ ತಿಂಗಳಲ್ಲೇ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ, ಅಧಿಕೃತ ಆರಂಭದ ದಿನಾಂಕವನ್ನು ಕಲರ್ಸ್ ಕನ್ನಡ ಇನ್ನೂ ಬಹಿರಂಗಪಡಿಸಿಲ್ಲ. ಪ್ರೋಮೋ ಬಿಡುಗಡೆಗೊಂಡಿರುವುದರಿಂದ ಶೀಘ್ರದಲ್ಲೇ ಸ್ಪರ್ಧಿಗಳ ಪಟ್ಟಿ ಹಾಗೂ ಆರಂಭದ ದಿನಾಂಕ ಘೋಷಣೆಯಾಗುವ ನಿರೀಕ್ಷೆಯಿದೆ

LEAVE A REPLY

Please enter your comment!
Please enter your name here