ಯೋಗದಿನಾಚರಣೆಯ ಪೂರ್ವಭಾವಿ ತರಬೇತಿ ಶಿಬಿರ ಆರಂಭ

0
13

ಮನಸ್ಸಿನ ಶಾಂತಿ, ಮತ್ತುಆತ್ಮವಿಶ್ವಾಸ ಹೆಚ್ಚಿಸಲುಯೋಗ– ಶ್ರೀ ಸ್ವಾಮಿಜಿತಕಾಮಾನಂದಜೀ ಮಹಾರಾಜ್

ಮಂಗಳೂರು : ನಗರದ ಮಂಗಳಾದೇವಿ ಸಮೀಪದಲ್ಲಿರುವ ಶ್ರೀ ರಾಮಕೃಷ್ಣ ಮಠದಲ್ಲಿ ನಡೆಯುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿ ಯೋಗತರಬೇತಿ ಶಿಬಿರ [ಜೂನ್‌ತಿಂಗಳ 2026]ಉದ್ಘಾಟನೆಗೊಂಡಿತು.

ಬಳಿಕ ಸ್ವಾಮಿಜಿತಕಾಮಾನಂದಜೀ ಮಹಾರಾಜ್ ಆಶೀರ್ವಚನದಲ್ಲಿ ದೈಹಿಕ ಹಾಗೂ ಮಾನಸಿಕ ಚಿಕಿತ್ಸೆಯುಯೋಗದ ಬಹುಮುಖ್ಯ ಸಾಧನೆಗಳಲ್ಲಿ ಒಂದು. ಬಳಿಕ ಆಶೀರ್ವಚನ ನೀಡಿದಅವರು “ಯೋಗವುಜೀವನದಎಲ್ಲಾ ಅಂಶಗಳ ನಡುವೆ ಸಮತೋಲನವನ್ನು ಸಾಧಿಸುವುದರಜೊತೆಗೆಆರೋಗ್ಯ ಮತ್ತುಯೋಗಕ್ಷೇಮಕ್ಕೆ ಸಮಗ್ರ ವಿಧಾನವನ್ನುಒದಗಿಸುತ್ತದೆ. ಯೋಗವು ಪ್ರಾಚೀನದಿಂದಲೂದೈಹಿಕ, ಮಾನಸಿಕ ಮತ್ತುಆಧ್ಯಾತ್ಮಿಕಅಭ್ಯಾಸವಾಗಿದ್ದು, ಜನರಿಗೆ ಶಾಂತತೆ, ಶಾಂತಿ, ಆತ್ಮವಿಶ್ವಾಸ ಮತ್ತುಧೈರ್ಯವನ್ನು ನೀಡುತ್ತದೆ. ನಿಯಮಿತವಾಗಿಯೋಗಾಭ್ಯಾಸ ಮಾಡಿದರೆಆರೋಗ್ಯಕ್ಕೆ ಸಂಬAಧಿಸಿದ ಸಮಸ್ಯೆಗಳನ್ನು ನಿಯಂತ್ರಣದಲ್ಲಿಟ್ಟುಕೊAಡುಉತ್ತಮವಾಗಿ ಬಾಳಬಹುದಾಗಿದೆ. ಎಂದುತಿಳಿಸಿದರು.

ದೇಲಂಪಾಡಿಯೋಗ ಪ್ರತಿಷ್ಠಾನದಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ಶಿಬಿರಾರ್ಥಿಗಳಿಗೆ ಅಂತರಾಷ್ಟ್ರೀಯ ಯೋಗದಿನಾಚರಣೆಯ ಮಾಹಿತಿ ಮತ್ತುಯೋಗಾಭ್ಯಾಸದಿಂದ ಆಗುವ ಪ್ರಯೋಜನ ಹಾಗೂ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಉದ್ದೇಶಗಳನ್ನುತಿಳಿಸಿದರು.

ಯೋಗದ ಪ್ರಯೋಜನಗಳ ಬಗ್ಗೆ ಜನರಿಗೆಅರಿವು ಮೂಡಿಸಿ ಮತ್ತು ಅವುಗಳನ್ನು ಪ್ರಕೃತಿಯೊಂದಿಗೆ ಸಂಪರ್ಕಪಡಿಸುವುದು. ವಿಶ್ವದೆಲ್ಲೆಡೆ ಆರೋಗ್ಯ ಸವಾಲಿನ ರೋಗಗಳ ಪ್ರಮಾಣವನ್ನುಕಡಿಮೆ ಮಾಡುವುದು. ಪ್ರಪಂಚದಾದ್ಯಂತ ಬೆಳವಣಿಗೆ, ಅಭಿವೃದ್ಧಿ ಮತ್ತು ಶಾಂತಿಯನ್ನು ಹರಡುವುದು.

ದೈಹಿಕ ಮತ್ತು ಮಾನಸಿಕ ಕಾಯಿಲೆಗಳ ಬಾಗೆ ಜನರಿಗೆಅರಿವು ಮೂಡಿಸುವುದು ಮತ್ತುಯೋಗದ ಮೂಲಕ ಪರಿಹಾರಗಳನ್ನು ಒದಗಿಸುವುದು. ಇದು ಮನಸ್ಸಿನ ಶಾಂತಿ, ಒತ್ತಡರಹಿತ ವಾತಾವರಣದಲ್ಲಿ ಬದುಕಲುಅಗತ್ಯವಾದ ಸ್ವಯಂಅರಿವಿಗಾಗಿಧ್ಯಾನದಅಭ್ಯಾಸವನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಯೋಗವುದೇಹ ಮತ್ತು ಮನಸ್ಸುಎರಡನ್ನೂ ಆರೋಗ್ಯಕರಗೊಳಿಸುತ್ತದೆ.

ನಮ್ಮಜೀವನಶೈಲಿ ದಿನದಿಂದ ದಿನಕ್ಕೆ ಬದಲಾಗುತ್ತಿರುವುದರಿಂದಯೋಗ ಮಾಡುವುದು ಸಹ ಕಡ್ಡಾಯವಾಗಿದೆ. ಹೃದಯ ವ್ಯವಸ್ಥೆಯನ್ನುಆರೋಗ್ಯಕರವಾಗಿಡಲು ಸಹ ಯೋಗ ಸಹಾಯಮಾಡುತ್ತದೆ. ಪ್ರಪಂಚದಾದ್ಯಂತಆರೋಗ್ಯ ಸಮಸ್ಯೆಯ ಕಾಯಿಲೆಗಳನ್ನು ಕಡಿಮೆ ಮಾಡಲುಯೋಗ ಸಹಾಯಮಾಡುತ್ತದೆಎಂಬುದರಲ್ಲಿ ಸಂಶಯವಿಲ್ಲ.
ಒತ್ತಡದಿAದ ಪರಿಹಾರ ಪಡೆಯಲುಧ್ಯಾನ ಮತ್ತುಯೋಗದಅಭ್ಯಾಸ ಪರಿಣಾಮಕಾರಿ ಸಹಾಯ ಮಾಡುತ್ತದೆಎಂದುದೇಲಂ ಪಾಡಿಯವರು ತಿಳಿಸಿದರು.

ದೇಲಂಪಾಡಿ ಶಿಷ್ಯರಾದ ಸುಮಾ,ತುಕರಾಮ, ಹಾಗೂ ಪ್ರೇಮಇವರು ಸಹಕರಿಸಿದರು. ಈ ಯೋಗ ಶಿಬಿರದಲ್ಲಿ ಭಾಗವಹಿಸಲು ಆಸಕ್ತರು ಮಠವನ್ನು ಸಂಪರ್ಕಿಸಿರಿ ಎಂದು ಶ್ರೀ ದೇಲಂಪಾಡಿಯವರು ತಿಳಿಸಿದರು. ಸಂಪರ್ಕ: 0824-2414412

LEAVE A REPLY

Please enter your comment!
Please enter your name here