ಆರೋಗ್ಯಕರ ಜೀವನಕ್ಕಾಗಿ ಅಳದಂಗಡಿಯಲ್ಲಿ 48 ದಿನಗಳ ಉಚಿತ ಯೋಗ ತರಗತಿ; ಜೂನ್ 7ರಂದು ಉದ್ಘಾಟನೆ

0
62

ಅಳದಂಗಡಿ : ಆರೋಗ್ಯಪೂರ್ಣ ಜೀವನಶೈಲಿಯನ್ನು ಜನರಲ್ಲಿ ಬೆಳೆಸುವ ಉದ್ದೇಶದಿಂದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.), ಕರ್ನಾಟಕ, ನೇತ್ರಾವತಿ ವಲಯ, ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ಇವರ ಆಶ್ರಯದಲ್ಲಿ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿ ಆಯೋಜಿಸಲಾಗಿದೆ.

ಈ ಯೋಗ ತರಗತಿಯ ಉದ್ಘಾಟನಾ ಕಾರ್ಯಕ್ರಮವು ಜೂನ್ 7, 2026ರ ಭಾನುವಾರ ಬೆಳಗ್ಗೆ 6.00-7.00 ಗಂಟೆಯವರೆಗೆ ಅಳದಂಗಡಿಯ ಶ್ರೀ ನಮನ ಸಭಾಭವನದಲ್ಲಿ ನಡೆಯಲಿದೆ.

ಉದ್ಘಾಟನೆಯ ಬಳಿಕ ಪ್ರತಿದಿನ ಬೆಳಗ್ಗೆ 5.00 ರಿಂದ 6.30 ಗಂಟೆಯವರೆಗೆ ಯೋಗ ತರಗತಿಗಳು ನಡೆಯಲಿದ್ದು, ಕೇಂದ್ರ ಸಮಿತಿಯಿಂದ ತರಬೇತಿ ಪಡೆದ ಅನುಭವಿ ಶಿಕ್ಷಕರು ತರಗತಿಗಳನ್ನು ನಡೆಸಿಕೊಡಲಿದ್ದಾರೆ.

ಯೋಗಾಭ್ಯಾಸದ ಮೂಲಕ ಮಧುಮೇಹ, ರಕ್ತದೊತ್ತಡ, ಬೊಜ್ಜು, ಮೂಲವ್ಯಾಧಿ, ಅಸಿಡಿಟಿ, ಅಲರ್ಜಿ, ಸಂಧಿವಾತ, ನಿದ್ರಾಹೀನತೆ, ಕಾತರೋಗ, ಮಾನಸಿಕ ಒತ್ತಡ, ಮಂಡಿನೋವು ಹಾಗೂ ಬೆನ್ನುನೋವು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಲು ಸಹಕಾರಿಯಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

10ರಿಂದ ಮೇಲ್ಪಟ್ಟ ಎಲ್ಲಾ ವಯಸ್ಸಿನವರು ಭಾಗವಹಿಸಬಹುದು , 9449228822, 9845088705 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here