ಸಚ್ಚೇರಿಪೇಟೆ : ಕಿನ್ನಿಗೋಳಿ ಉಪವಲಯ ಅರಣ್ಯಾಧಿಕಾರಿಗಳಾದ ನಿಂಗಪ್ಪ ವಾಲಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. “ಪರಿಸರ ಪ್ರೇರಣೆಯಿಂದ ಭವಿಷ್ಯಕ್ಕಾಗಿ ಮತ್ತು ವಾತಾವರಣಕ್ಕಾಗಿ” ಎಂಬ ಘೋಷಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಸಸ್ಯ ಸಂಪತ್ತಿನ ನಾಶದಿಂದ ಭೂಮಿಯ ಸಮತೋಲನಕ್ಕೆ ಅಪಾಯ ಉಂಟಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗಿಡ-ಮರಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ಮುಖ್ಯ ಶಿಕ್ಷಕರಾದ ಗೌರವ್ ಆರ್. ಕೆ. ಅವರು ಪ್ರತಿ ಮಗು ಬಾಲ್ಯದಿಂದಲೇ ಸಸಿ ನೆಡುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿ ಸಂದರ್ಭೋಚಿತವಾಗಿ ಮಾತನಾಡಿದರು.

ಅರಣ್ಯ ಇಲಾಖೆಯಿಂದ ನೀಡಲಾದ ಸಸಿಗಳನ್ನು ಗಣ್ಯರು ಹಾಗೂ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ನೆಟ್ಟರು.
ಸಮಾರಂಭದಲ್ಲಿ ಅರಣ್ಯಾಧಿಕಾರಿ ಮನೀಷ್, ಸಂಚಾಲಕರಾದ ಲಯನ್ ಕೆ. ಸತ್ಯಶಂಕರ್ ಶೆಟ್ಟಿ, ಮು.ಕ. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಯಶವಂತ ಆಚಾರ್ಯ, ಕಾರ್ಯದರ್ಶಿಯಾದ ಲಯನ್ ಸುರೇಶ್ ,ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಶ್ರಾವ್ಯಾ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಶಾನ್ವಿ ಎಸ್. ಸ್ವಾಗತಿಸಿದರು ಹಾಗೂ ಕುಮಾರಿ ತಾನ್ಯ ವಂದನಾರ್ಪಣೆ ಗೈದರು.

