ರಾಮಕೃಷ್ಣ ಮಿಷನ್ ವತಿಯಿಂದ ಶೈಕ್ಷಣಿಕ ವರ್ಷದ ಶುಭಾರಂಭ ಹಾಗೂ ಶಾಲಾ ಸಾಮಗ್ರಿಗಳ ವಿತರಣೆ

0
18

ಮಂಗಳೂರು : ರಾಮಕೃಷ್ಣ ಮಿಷನ್, ಮಂಗಳೂರು ವತಿಯಿಂದ 2026–27ನೇಶೈಕ್ಷಣಿಕವರ್ಷದಶುಭಾರಂಭದ ಅಂಗವಾಗಿ ವಿದ್ಯಾರ್ಥಿಗಳಿಗೆಶಾಲಾಸಾಮಗ್ರಿಗಳ ವಿತರಣಾಕಾರ್ಯಕ್ರಮವುರಾಮಕೃಷ್ಣ ಮಠ, ಮಂಗಳೂರಿನಲ್ಲಿ ಅರ್ಥಪೂರ್ಣವಾಗಿ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಾಮಿಜಿತಕಾಮಾನಂದಜಿ, ಅಧ್ಯಕ್ಷರು, ರಾಮಕೃಷ್ಣ ಮಠ, ಮಂಗಳೂರು ವಹಿಸಿದ್ದರು. ಉದ್ಭವ್‌ಡೆವಲಪರ್ಸ್, ಮಂಗಳೂರು ಸಂಸ್ಥಾಪಕರಾದಶ್ರೀ ಬಿ. ಕೆ. ಕಿರಣ್ ಮುಖ್ಯಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶಾಲಾ ಸಾಮಗ್ರಿಗಳನ್ನು ವಿತರಿಸಿದರು.ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ, ಆತ್ಮವಿಶ್ವಾಸ ಮತ್ತು ಸಕಾರಾತ್ಮಕಜೀವನ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರವಹಿಸುತ್ತವೆಎಂದುಅವರುಅಭಿಪ್ರಾಯ ಪಟ್ಟರು .

ರಾಮಕೃಷ್ಣ ಮಿಷನ್, ಮಂಗಳೂರು ಹಲವು ವರ್ಷಗಳಿಂದ ‘ವಿವೇಕಾನಂದ ತರಬೇತಿಕೇಂದ್ರ’ದ ಮೂಲಕ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಶೈಕ್ಷಣಿಕ ನೆರವು, ಮೌಲ್ಯ ಶಿಕ್ಷಣ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ತರಬೇತಿಗಳನ್ನು ನೀಡುತ್ತಿದೆ.

ಗೋ ಡಿಜಿಟ್‌ ಜನರಲ್‌ ಇನ್ಶೂರೆನ್ಸ್ ಲಿಮಿಟೆಡ್ ಸಂಸ್ಥೆಯ ಸಿಎಸ್‌ಆರ್ ಸಹಯೋಗದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಸಮವಸ್ತ್ರ, ಕೊಡೆ, ನೋಟ್ ಪುಸ್ತಕಗಳು ಹಾಗೂ ಇತರಅಗತ್ಯ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here