ಮೂಡುಬಿದಿರೆ : ಇಲ್ಲಿನ ಕೆಸರಗದ್ದೆ ಶ್ರೀರಾಮ ಮಂದಿರ ದಲ್ಲಿ ಅಧಿಕ ಪುರುಷೋತ್ತಮ ಮಾಸದ ಆಚರಣೆಯ ಪ್ರಯುಕ್ತ ಜೂನ್ 7 ರ ಭಾನುವಾರ, ಸೀತಾಪತಿ ಶ್ರೀರಾಮಚಂದ್ರ ದೇವರಿಗೆ ವಿಶೇಷ ಹೂವಿನ ಪೂಜೆ ನೆರವೇರಿತು. ಭಜಕ ವೃಂದದಿಂದ ನೀಡಲಾದ ಸುಮಾರು ನಲವತ್ತು ಅಟ್ಟೆ ಮಲ್ಲಿಗೆಯ ಅಲಂಕಾರ ಆಕರ್ಷಣೀಯವಾಗಿತ್ತು.
ಕಾರ್ಕಳದ ಜಿ.ಎಸ್.ಬಿ. ಬಾಲಕರ ಭಜನ್ ಸಂಧ್ಯಾ, ಮಂಗಳೂರಿನ ಮೇಘಾ ಪೈ ಬಳಗದ ಭಜನಾ ಸಂಗಮ, ಕೊಂಚಾಡಿ ಮುರಳೀಧರ ಕಾಮತ್ ಬಳಗದ ಭಜನಾ ಕಾರ್ಯಕ್ರಮ ಯಶಸ್ವಿಯಾಗಿ ಜರಗಿ ಭಕ್ತರನ್ನು ಭಕ್ತಿಯಲ್ಲಿ ತಲ್ಲಿನರಾಗುವಂತೆ ಮಾಡಿತು.
ವೇ.ಮೂ. ಪದ್ಮನಾಭ ಭಟ್ ಹಾಗೂ ಸುಧೇಶ್ ಭಟ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಮಾಜದ ಅಧ್ಯಕ್ಷ ಕೆ.ವಿಶ್ವನಾಥ ಮಾಧವ ಪ್ರಭು,ಹಿರಿಯರಾದ ಎಂ ದಯಾನಂದ ಪೈ ಪಡುಮಾರ್ನಾಡು ಸಹಿತ ಅಪಾರ ಸಂಖ್ಯೆಯಲ್ಲಿ ಭಜಕ ವೃಂದ ಉಪಸ್ಥಿತರಿದ್ದರು.

