ಬಸ್ರೂರು ಮಂಡಿಕೇರಿ ಶ್ರೀ ಮಹಾಲಸ ನಾರಾಯಣಿ ದೇವಸ್ಥಾನದಲ್ಲಿ ಅಷ್ಟೋತ್ತರ ಶತ ದಂಪತಿ ಪೂಜಾ ಕಾರ್ಯಕ್ರಮ

0
41

ಕುಂದಾಪುರ : ಬಸ್ರೂರು ಮಂಡಿಕೇರಿ ಶ್ರೀ ಮಹಾಲಸ ನಾರಾಯಣಿ ದೇವಸ್ಥಾನ ದಲ್ಲಿ  ಶ್ರೀ ದೇವರ ಸನ್ನಿಧಿಯಲ್ಲಿ  ಅಧಿಕ ಜ್ಯೇಷ್ಠ ಮಾಸದ ಪ್ರಯುಕ್ತ  ಇತ್ತೀಚಿಗೆ ವಿಶೇಷ   ಅಷ್ಟೋತ್ತರ ಶತ ದಂಪತಿ ಪೂಜಾ ಕಾರ್ಯಕ್ರಮ ವು ತಂತ್ರಿಗಳಾದ ವೇದಮೂರ್ತಿ  ಪ್ರಸನ್ನ ಭಟ್ ಹಾಗೂ ಪ್ರಧಾನ ಅರ್ಚಕ ರಾದ ಶ್ರೀ ರಾಮಚಂದ್ರ ಭಟ್ ಇವರ ನೇತ್ರತ್ವ ದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.

ಮೂರೂರು  ಪೈ ಕುಟುಂಬದ ದಂಪತಿ ಗಳಾದ ಡಾ.ಎಮ್. ವಿಶ್ವನಾಥ ಪೈ ಮತ್ತು ಸ್ವರ್ಣಲಕ್ಶ್ಮಿ  ಪೈ, ಎಮ್. ಅನಂತ ಪದ್ಮನಾಭ ಪೈ ಮತ್ತು ಕಲ್ಪನಾ ಪೈ ಹಾಗೂ ಎಮ್.ಮುರಳೀಧರ ಪೈ ಮತ್ತು ಮೈತ್ರಿ ಪೈ ಇವರ ಪೂಜ್ಯ ಮಾತಾಪಿತರಾದ ದಿವಂಗತ ಎಮ್.ಚಂದ್ರಕಲಾ ಪೈ ಮತ್ತು  ದಿವಂಗತ ಎಮ್. ಗೋಕುಲದಾಸ  ಪೈ ಇವರ  ಸವಿನೆನಪಿಗಾಗಿ  ಪುರುಷೋತ್ತಮ ಮಾಸದ ಪ್ರಯುಕ್ತ ಶ್ರೀ ಮಹಾಲಸ ದೇವಿಗೆ ಲಘುವಿಷ್ಣು ಪಾರಾಯಣ ಹಾಗು ಪವಮಾನ  ಅಭಿಷೇಕ  , ವಿಶೇಷ  ಅಲಂಕಾರ  , ಭಜನಾ ಕಾರ್ಯಕ್ರಮ  , ಮಹಾಪೂಜೆ  ಬಳಿಕ   145 ದಂಪತಿ ಪೂಜೆ ,ಅನ್ನಸಂತರ್ಪಣೆ ನೆಡೆಯಿತು .

ಮೂರೂರು  ಚಿಕ್ಕಲ್ ಬೆಟ್ಟು ಪೈ ಕುಟುಂಬಸ್ಥರೆಲ್ಲ ಸಹಕರಿಸಿದರು , ವಿವಿಧ ಊರಿನಿಂದ ಆಗಮಿಸಿದ  ಅರ್ಚಕ ವೃಂದ  ದಂಪತಿಗಳು  ,  ನೂರಾರು ಸಮಾಜ ಬಾಂದವರು ಉಪಸ್ಥರಿದ್ದರು .

LEAVE A REPLY

Please enter your comment!
Please enter your name here