ತಮಿಳಿನಲ್ಲೂ ಸದ್ದು ಮಾಡಿದ ರೂಪೇಶ್‌ ಶೆಟ್ಟಿ

0
44

ತಮಿಳಿನ ಸನ್ನಿಧಾನಂ ಪಿ.ಒ. ರಿಲೀಸ್‌ – ಶೀಘ್ರದಲ್ಲೇ ಸೆಟ್ಟೇರಲಿದೆ ಕನ್ನಡದ “ಹಲ್ಕಾ ಡಾನ್‌”

ಕರಾವಳಿಯ ನಗುಮೊಗದ ಹೀರೋ ರಾಕ್ ಸ್ಟಾರ್ ರೂಪೇಶ್‌ ಶೆಟ್ಟಿ ಅವರು ಬಿಗ್‌ಬಾಸ್‌ ವಿನ್ನರ್‌ ಆದ ಬಳಿಕ ಬಹುಬೇಡಿಕೆಯ ನಟ, ನಿರೂಪಕರಾಗಿ ಗುರುತಿಸಿಕೊಂಡಿದ್ದು, ತಾನು ಕೈಯಾಡಿಸಿದ ಪ್ರತಿಯೊಂದರಲ್ಲೂ ಸಕ್ಸಸ್‌ ಆಗುತ್ತಿರುವುದು ಅವರ ಪ್ರತಿಭೆಗೆ ಸಾಕ್ಷಿ.

ಐಪಿಎಲ್‌ ಸಂದರ್ಭದಲ್ಲೂ ಟೀವಿ ಚಾನೆಲ್‌ನಲ್ಲಿ ಕಾಮೆಂಟರರ್‌ ಆಗಿ ಬ್ಯುಸಿಯಾಗಿದ್ದ ರೂಪೇಶ್‌ ಶೆಟ್ಟಿ, ಈಗ ಸುಲಭದಲ್ಲಿ ಯಾರ ಕೈಗೂ ಸಿಗದಷ್ಟು ಕೆಲಸಕಾರ್ಯಗಳಲ್ಲಿ ವ್ಯಸ್ತರಾಗಿದ್ದಾರೆ. ಅವರ ನಟನೆಯ “ಜೈ” ಸಿನಿಮಾವಂತೂ ಸೂಪರ್‌ ಹಿಟ್‌ ಆಗಿ, ನೂರು ದಿನಗಳನ್ನು ಪೂರೈಸಿ ನಿರ್ಮಾಪಕರಿಗೆ ಖುಷಿ ಕೊಟ್ಟಿದೆ. ಒಂದು ಹೊಸ ರೂಪದ ಸಿನೆಮಾ ಎಂದು ಜನಮನ್ನಣೆಯನ್ನೂ ಗಳಿಸಿದೆ. ಜೊತೆಗೆ ಹೊಸ ತುಳು ಸಿನಿಮಾ “ಬ್ರೋ” ಘೋಷಣೆಯಾಗಿದೆ.

ಈಗ ರೂಪೇಶ್‌ ನಟಿಸಿರುವ ಮೊದಲ ತಮಿಳು ಸಿನೆಮಾ ಸನ್ನಿಧಾನಂ ಪಿ.ಒ. ತಮಿಳುನಾಡಿನಾದ್ಯಂತ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇವರ ನಟನೆಗೆ ತಮಿಳರು ಕೂಡ ಫಿದಾ ಆಗಿದ್ದು, ರೂಪೇಶ್‌ ಶೆಟ್ಟಿಗೆ ಅಲ್ಲೂ ಭಾರೀ ಬೇಡಿಕೆ ವ್ಯಕ್ತವಾಗುವ ಸಾಧ್ಯತೆ ಇದೆ.

ಈ ನಡುವೆ ಇವರು ಮತ್ತೊಂದು ಕನ್ನಡ ಸಿನೆಮಾದಲ್ಲೂ ನಟಿಸುತ್ತಿದ್ದಾರೆ. ಈಗಾಗಲೇ ಕೆಲವು ಕನ್ನಡ ಸಿನೆಮಾಗಳಲ್ಲಿ ನಟಿಸಿರುವ ರೂಪೇಶ್‌, ಈಗ ಹಲ್ಕಾ ಡಾನ್‌ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾವನ್ನು ಮೈಲಾರಿ, ಟಗರು, ಸಲಗ, UI ನಂತಹ ಸೂಪರ್ ಹಿಟ್ ಚಿತ್ರಗಳನ್ನ ಕೊಟ್ಟಿರುವ ನಿರ್ಮಾಪಕರಾದ ಕೆ.ಪಿ. ಶ್ರೀಕಾಂತ್ ಅವರೇ ನಿರ್ಮಾಣ ಮಾಡುತ್ತಿದ್ದು, ಚಲ ಅವರು ನಿರ್ದೇಶಕರಾಗಿದ್ದಾರೆ.

LEAVE A REPLY

Please enter your comment!
Please enter your name here