ಜರ್ನಿ ಥೇಟರ್ ಗ್ರೂಪ್‌ಗೆ ಹೊಸ ನಾಯಕತ್ವ : ವಿದ್ದು ಉಚ್ಚಿಲ್ ಅಧ್ಯಕ್ಷರಾಗಿ ಆಯ್ಕೆ

0
3

ಮಂಗಳೂರು: ಮಂಗಳೂರಿನ ಜರ್ನಿ ಥೇಟರ್ ಗ್ರೂಪ್ (ರಿ.) ಇದರ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ಸಂಸ್ಥೆಯ ಮುಂದಿನ ಅವಧಿಗೆ ನೂತನ ಪದಾಧಿಕಾರಿಗಳು ಹಾಗೂ ವಿವಿಧ ಚಟುವಟಿಕೆಗಳ ಉಪಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ವಿದ್ದು ಉಚ್ಚಿಲ್, ಉಪಾಧ್ಯಕ್ಷರಾಗಿ ರೋಹನ್ ಉಚ್ಚಿಲ್, ಕಾರ್ಯದರ್ಶಿಯಾಗಿ ಸುನಿಲ್ ಪಲ್ಲಮಜಲು, ಜೊತೆ ಕಾರ್ಯದರ್ಶಿಯಾಗಿ ಮೇಘನಾ ಕುಂದಾಪುರ ಹಾಗೂ ಖಜಾಂಚಿಯಾಗಿ ಶಶಾಂಕ್ ಐತಾಳ್ ಆಯ್ಕೆಯಾಗಿದ್ದಾರೆ.

ಇದೇ ವೇಳೆ ಸದಸ್ಯರಾಗಿ ಸುಧೀಶ್ ಕೂಡ್ಲು, ರಾಘವ್ ಸೂರಿ ಮತ್ತು ರಾಹುಲ್ ಕುಡುಪು ಆಯ್ಕೆಯಾಗಿದ್ದಾರೆ.

ವಿವಿಧ ಸಾಂಸ್ಕೃತಿಕ ಹಾಗೂ ಸಂಘಟನಾ ಚಟುವಟಿಕೆಗಳ ನಿರ್ವಹಣೆಗಾಗಿ ರಚಿಸಲಾದ ಉಪಸಮಿತಿಗೆ ಗೌತಮ್ ಶೆಟ್ಟಿ, ಕ್ಷಿತಿ, ರೋಹಿಲ್ ಶೆಟ್ಟಿ, ವಿನಿತಾ, ಶಮಿತಾ, ಶರಣ್ಯ, ಕಾವ್ಯ ಶ್ರೀ ಹಾಗೂ ಶ್ರೀಶ ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.

ಸಭೆಯಲ್ಲಿ ಸಂಸ್ಥೆಯ ಮುಂದಿನ ಕಾರ್ಯಕ್ರಮಗಳು, ನಾಟಕ ಚಟುವಟಿಕೆಗಳು ಹಾಗೂ ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಕುರಿತು ಚರ್ಚೆ ನಡೆಯಿತು. ನೂತನ ಪದಾಧಿಕಾರಿಗಳಿಗೆ ಸದಸ್ಯರು ಅಭಿನಂದನೆ ಸಲ್ಲಿಸಿ, ಸಂಸ್ಥೆಯ ಬೆಳವಣಿಗೆಗೆ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here