ರವಿ ಬೆಳ್ಳಿ ದೋಸೆ ಹೋಟೆಲ್ ಮಾಲೀಕ ರಾಕೇಶ್ ಅವರ ಪ್ರಾಮಾಣಿಕತೆಗೆ ಲಯನ್ಸ್ ಕ್ಲಬ್ ಸದಸ್ಯರಿಂದ ಸನ್ಮಾನ

0
7

ದಾವಣಗೆರೆ: ನಗರದ ಹೆಸರಾಂತ ‘ರವಿ ಬೆಳ್ಳಿ ದೋಸೆ ಹೋಟೆಲ್’ ಮಾಲೀಕರಾದ ದಿ. ರವಿ ಅವರ ಪ್ರತ್ರ ರಾಕೇಶ್ ಅವರ ಪ್ರಾಮಾಣಿಕತೆಯನ್ನು ಮೆಚ್ಚಿ ಲಯನ್ಸ್ ಕ್ಲಬ್ ಸದಸ್ಯರು ಸನ್ಮಾನಿಸಿದರು.

ಇತ್ತೀಚೆಗೆ ಲಯನ್ ಎಚ್.ವಿ. ಮಂಜುನಾಥ್ ಸ್ವಾಮಿ ದಂಪತಿಗಳು ಹೋಟೆಲ್‌ಗೆ ತಿಂಡಿಗೆ ಬಂದಾಗ ಆಕಸ್ಮಿಕವಾಗಿ ₹10,000 ನಗದು ಕಳೆದುಕೊಂಡಿದ್ದರು. ಆ ಹಣ ಇವರ ಹೋಟೆಲ್ ನಲ್ಲಿ ಸಿಕ್ಕ ಕೂಡಲೇ ಮಾಲೀಕ ರಾಕೇಶ್ ಅವರು ಸ್ವತಃ ಹುಡುಕಿಕೊಂಡು ಹೋಗಿ ಸಂಬAಧಪಟ್ಟವರಿಗೆ ಹಿಂದಿರುಗಿಸುವ ಮೂಲಕ ತಮ್ಮ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.

ತಮ್ಮದೇ ಆದ ಇತಿಹಾಸ ಹೊಂದಿರುವ ಪ್ರತಿಷ್ಠಿತ ಹೋಟೆಲ್‌ನ ಮಾಲೀಕ ರಾಕೇಶ್ ರವರ ಈ ಪ್ರಾಮಣಿಕತೆಯ ಕಾರ್ಯವನ್ನು ಗುರುತಿಸಿ ದಾವಣಗೆರೆ ಲಯನ್ಸ್ ಕ್ಲಬ್ ಸದಸ್ಯರು ರಾಕೇಶ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಪ್ರಾಮಾಣಿಕತೆಯೇ ದೊಡ್ಡ ಆಸ್ತಿ ಎಂಬುದಕ್ಕೆ ರಾಕೇಶ್ ಅವರ ನಡೆ ಮಾದರಿಯಾಗಿದೆ ಎಂದು ಲಯನ್ಸ್ ಕ್ಲಬ್ ಸದಸ್ಯರು ಶ್ಲಾಘಿಸಿದರು.

LEAVE A REPLY

Please enter your comment!
Please enter your name here